ಮೈಸೂರು : ಮೈಸೂರಲ್ಲಿ ಇಂದು ಬೆಳಿಗ್ಗೆ ತಾನೇ ಬಸ್ ನಲ್ಲಿ ಸಂಚರಿಸುವಾಗ ಸರ್ಕಾರಿ ನೌಕರರೊಬ್ಬರೂ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೊಂದು ಘಟನೆ ವರದಿಯಾಗಿದ್ದು, ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರೂ ಹೃದಯಾಘಾತದಿಂದ ಸಾವನ್ನಪಿದ್ದಾರೆ.
ಹೌದು ಮೈಸೂರಲ್ಲಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಜಿಲ್ಲೆಯ ಟಿ. ನರಸೀಪುರ ದೇಗುಲದ ಪ್ರಧಾನ ಅರ್ಚಕ ಸಂಪತ್ ಕುಮಾರ್ ಇದೀಗ ಸಾವನಪ್ಪಿದ್ದಾರೆ. ಸಂಪತ್ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾಗಿದ್ದು, ಇವರು ಮೂಲತಃ ರಾಮನಗರ ಜಿಲ್ಲೆಯ ನಿವಾಸಿಯಾಗಿದ್ದು, ತಡರಾತ್ರಿ ಅವರಿಗೆ ತೀವ್ರ ಎದೆ ನೋವಿನಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.