ಬೆಂಗಳೂರು : ದಕ್ಷಿಣಭಾರತದ ಬಹುತೇಕ ಬ್ಲಾಸ್ಟ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಟಿ.ನಾಸಿರ್ ಗೆ ಸಹಾಯ ಮಾಡಿದ ಹಿನ್ನೆಲೆ NIA ಮೂವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿದೆ. ASI ಚಾನ್ ಪಾಷಾ, ವೈದ್ಯ ನಾಗರಾಜ್ ಹಾಗು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರ ಜುನೈದ್ ತಾಯಿ ಫಾತಿಮಳನ್ನು NIA ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೀಗ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕವಾದ ಅಂಶಗಳು ಬಯಲಾಗಿದ್ದು, ಸದ್ಯ ಮತ್ತೋರ್ವ ಉಗ್ರ ಜುನೈದ್ ಗಲ್ಫ್ ದೇಶದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ.
ಹೌದು ಎನ್‌ಐಎ ಅಧಿಕಾರಿಗಳಿಂದ ಮೂವರು ಶಂಕಿತ ಉಗ್ರರ ಬಂಧನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ನಾಲ್ಕನೇ ದಿನದ ಕಸ್ಟಡಿಯಲ್ಲಿ ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಮೂವರ ಉಗ್ರರ ಬಾಯಿ ಬಿಡಿಸುವಲ್ಲಿ ನಿರತರಾಗಿದ್ದಾರೆ.
ಇದೇ ವೇಳೆ ಉಗ್ರ ಜುನೈದ್ ಮಧ್ಯರಾತ್ರಿ ಮೊಬೈಲ್‌ನಲ್ಲಿ ಕರೆ ಮಾಡಿ ಹಲವರೊಂದಿಗೆ ಮಾತನಾಡುತ್ತಿದ್ದ. ತನ್ನ ತಾಯಿಗೂ ಸಹ ಕರೆ ಮಾಡುತ್ತಿದ್ದು, ತಾಯಿ ಉನ್ನಿಸಾ ಸಹ ಉಗ್ರರ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳೆಂಬ ವಿಷಯ ತನಿಖೆಯಲ್ಲಿ ಬಯಲಾಗಿದೆ. ಜೈಲಿನಲ್ಲಿರುವ ಉಗ್ರ ನಾಸೀರ್ ಹಾಗೂ ಜುನೈದ್ ಮಧ್ಯೆ ವಿಚಾರಗಳ ಉನ್ನಿಸಾ ಪರಸ್ಪರರಿಗೆ ತಿಳಿಸುತ್ತಿದ್ದಳು ಎಂದು ಎನ್‌ಐಎ ಅಧಿಕಾರಿಗಳು ಹೊರಗೆಡವಿದ್ದಾರೆ. ಇದರಿಂದ ತನಿಖೆಯನ್ನು ದಿಕ್ಕು ತಪ್ಪಿಸಲು ಉಗ್ರರು ಮಾಡಿದ್ದ ಪ್ಲಾನ್ ಗೆ ಪೊಲೀಸ್ ಅಧಿಕಾರಿ ಚಾನ್ ಪಾಶಾ ಸಹಕಾರ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಶಂಕಿತ ಉಗ್ರರ ಮೊಬೈಲ್ ಪರಿಶೀಲನೆ ನಡೆಸಿರುವ ಎನ್‌ಐಎ ,ಬಂಧಿತರು ಯಾರಿಗೆ, ಎಷ್ಟು ಹೊತ್ತಿನಲ್ಲಿ ಕರೆಮಾಡಿದ್ದರು. ಎಷ್ಟು ಸಮಯ ಮಾತನಾಡಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದೆ. ತಾಯಿ ಉನ್ನಿಸಾಗೆ ಮಧ್ಯರಾತ್ರಿ ಕರೆ ಮಾಡ್ತಿದ್ದ ವಿದೇಶದಲ್ಲಿ ತಲೆ ಮರೆಸಿಕೊಂಡಿರೋ ಉಗ್ರ ಜುನೈದ್, ರಾತ್ರಿ 2 ಗಂಟೆ ಸುಮಾರಿಗೆ ಕರೆ ಮಾಡಿ ಹಲವು ವಿಚಾರಗಳನ್ನು ಮಾತನಾಡುತ್ತಿದ್ದ, ಅದನ್ನು ಉಗ್ರರ ಬೆಂಬಲಿಗ ಪೊಲೀಸ್ ಎಎಸ್‌ಐ ಚಾನ್ ಪಾಷಾಗೆ ಉನ್ನಿಸಾ ತಲುಪಿಸುತ್ತಿದ್ದಳು. ಉನ್ನಿಸಾ ಹಂಚಿಕೊಂಡ ವಿಚಾರಗಳನ್ನು ಟಿ. ನಾಸಿರ್ ಗೆ ಚಾನ್ ಪಾಷಾ ತಲುಪಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.