ನವದೆಹಲಿ: ಕುಡಿದ ಮತ್ತಿನಲ್ಲಿ ಚಾಲಕ ಚಲಾಯಿಸುತ್ತಿದ್ದ ಕಾರು ಫುಟ್ಪಾತ್ ಮೇಲೆ ಹತ್ತಿ ಅವರ ಮೇಲೆ ಹರಿದ ಪರಿಣಾಮ ಎಂಟು ವರ್ಷದ ಬಾಲಕಿ ಸೇರಿದಂತೆ ಐದು ಜನರು ಗಾಯಗೊಂಡಿರುವ ಘಟನೆ ದಕ್ಷಿಣ ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಅಧಿಕಾರಿಗಳ ಪ್ರಕಾರ, ಘಟನೆ ನಡೆದಾಗ ಇಬ್ಬರು ದಂಪತಿಗಳು ಮತ್ತು ಮಗು ಸೇರಿದಂತೆ ಸಂತ್ರಸ್ತರು ಶಿವ ಕ್ಯಾಂಪ್ ಬಳಿಯ ಫುಟ್ಪಾತ್ನಲ್ಲಿ ಮಲಗಿದ್ದರು. ಆಡಿ ಕಾರನ್ನು ಮದ್ಯದ ಅಮಲಿನಲ್ಲಿ ಓಡಿಸಲಾಗುತ್ತಿತ್ತು ಎಂದು ವರದಿಯಾಗಿದೆ.
ಜುಲೈ 9 ರಂದು ಮುಂಜಾನೆ 1:45 ರ ಸುಮಾರಿಗೆ ಈ ಘಟನೆ ನಡೆದಿದ್ದು, ನಂತರ ಚಾಲಕನನ್ನು ಬಂಧಿಸಲಾಗಿದೆ. 40 ವರ್ಷದ ಉತ್ಸವ್ ಶೇಖರ್ ಎಂಬ ಚಾಲಕನ ವೈದ್ಯಕೀಯ ವರದಿಗಳು ಅವರು ವಾಹನ ಚಲಾಯಿಸುವಾಗ ಮದ್ಯದ ಅಮಲಿನಲ್ಲಿದ್ದರು ಎಂದು ದೃಢಪಡಿಸಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪುವಷ್ಟರಲ್ಲಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಲಾಧಿ (40), ಅವರ ಎಂಟು ವರ್ಷದ ಮಗಳು ಬಿಮ್ಲಾ, ಪತಿ ಸಬಾಮಿ (ಅಲಿಯಾಸ್ ಚಿರ್ಮಾ) (45), ರಾಮ್ ಚಂದರ್ (45) ಮತ್ತು ಅವರ ಪತ್ನಿ ನಾರಾಯಣಿ (35) ಎಂದು ಗುರುತಿಸಲಾಗಿದೆ. ಎಲ್ಲರೂ ರಾಜಸ್ಥಾನ ಮೂಲದವರು