ಮೈಸೂರು : ಇಂದು ಬೆಳಿಗ್ಗೆ 5:30 ರ ಸುಮಾರಿಗೆ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಡೀಸೆಲ್ ಸಾಗಿಸುತ್ತಿದ್ದ ಸರಕು ರೈಲಿನ ನಾಲ್ಕು ವ್ಯಾಗನ್‌ಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. 5 ಬೋಗಿಗಳಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ 22 ಬೋಗಿಗಳಿಗೆ ಆವರಿಸಿದೆ. ಸುತ್ತಮುತ್ತಲಿನ ದೇಶಗಳಲ್ಲಿ ಭೀತಿ ಉಂಟಾಗಿದೆ.
ಈ ಹಿನ್ನೆಲೆ ಇದೀಗ ಚೆನ್ನೈ ವಿಭಾಗದಲ್ಲಿ ಪೆಟ್ರೋಲಿಯಂ ಹೊತ್ತಿರುವ ಬೋಗಿ ವ್ಯಾಗನ್ ಪತನ ಹಾಗೂ ಬೆಂಕಿಯಿಂದಾಗಿ ರೈಲುಗಳ ರದ್ದತಿ ಕುರಿತು ಪ್ರಕಟಣೆ ಹೊರಡಿಸಿದ್ದು, ಚೆನ್ನೈ ವಿಭಾಗದ ತಿರುವಳ್ಳುರ್ ಬಳಿ ಪೆಟ್ರೋಲಿಯಂ ಭರಿತ ಬೋಗಿ ಟ್ಯಾಂಕ್ ವ್ಯಾಗನ್ (BTPN) ರೇಕ್ ಪತನಗೊಂಡು ನಂತರ ಬೆಂಕಿ ಹತ್ತಿದೆ. ಈ ಕಾರಣದಿಂದಾಗಿ ದಕ್ಷಿಣ ರೈಲ್ವೆಯು ಈ ಕೆಳಕಂಡ ರೈಲು ಸೇವೆಗಳನ್ನು ಇಂದಿಗೆ (13.07.2025) ರದ್ದುಗೊಳಿಸಿದೆ:
1. ರೈಲು ಸಂಖ್ಯೆ 20607 – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್, 13.07.2025 ರಂದು ರದ್ದುಗೊಂಡಿದೆ.
2. ರೈಲು ಸಂಖ್ಯೆ 12007 – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್, 13.07.2025 ರಂದು ರದ್ದುಗೊಂಡಿದೆ.
ರೈಲುಗಳನ್ನು ರದ್ದುಗೊಳಿಸಿ ಎಸ್. ಹಿರಿಯ ಕಾನೂನು ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಎಸ್.ಶ್ರೀಧರ್ ಅವರು ಪ್ರಕಟಣೆ ಹೋರಾಡಿಸಿದ್ದಾರೆ.