ಮಂಡ್ಯ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು ಚಾಕಲೇಟ್ ಆಸೆ ತೋರಿಸಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘೋರ ಘಟನೆ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಉತ್ತರ ಪ್ರದೇಶದ ಮೂಲದ ಓರ್ವ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಮೂಲದ ಪ್ರವೀಣ್ (21) ಎನ್ನುವ ಆರೋಪಿಯನ್ನು ಪೋಲಿಸಿರುವ ಅರೆಸ್ಟ್ ಮಾಡಿದ್ದು, ಸಂತ್ರಸ್ತ ಬಾಲಕಿಯ ಕುಟುಂಬ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದೇ ಫ್ಯಾಕ್ಟರಿಯಲ್ಲಿ ಆರೋಪಿ ಪ್ರವೀಣ್ ಕೂಡ ಕೆಲಸ ಮಾಡುತ್ತಿದ್ದ. ಇದೀಗ ಆರೋಪಿ ಪ್ರವೀಣನ್ನು ಬಂಧಿಸಿದ ಪೊಲೀಸರು ಆರೋಪಿ ವಿರುದ್ಧ BNS 65(2), 4, 5 (i) 5 (m), 6 ಹಾಗೂ ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.