ಹೈದ್ರಾಬಾದ್ : ತೆಲುಗು ಹಿರಿಯ ನಟ ಕೋಟ ಶ್ರೀನಿವಾಸರಾವ್ (83) ಇಂದು ವಿಧಿವಶರಾಗಿದ್ದಾರೆ. ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕೋಟ ಶ್ರೀನಿವಾಸರಾವ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಕೋಟಾ ಶ್ರೀನಿವಾಸರಾವ್ ಬಳಲುತ್ತಿದ್ದರು ಎನ್ನಲಾಗಿದೆ.
ಸುಮಾರು 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋಟಾ ಶ್ರೀನಿವಾಸರಾವ್ ನಟಿಸಿದ್ದರು. ಕೋಟ ಶ್ರೀನಿವಾಸ್ ರಾವ್ ಅವರ ಕೊನೆಯ ಚಿತ್ರ ಸುವರ್ಣ ಸುಂದರಿಯಾಗಿದ್ದು, ತೆಲುಗು ತಮಿಳು ಹಿಂದಿ ಕನ್ನಡ ಮಲಯಾಳಂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ನಮ್ಮ ಬಸವ, ರಕ್ತ ಕಣ್ಣೀರು ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅವರಿಗೆ ಪದ್ಮಶ್ರೀ ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ ಅಲ್ಲದೆ ಒಮ್ಮೆ ಶಾಸಕರಿಗೆ ಕೂಡ ಸೇವೆ ಸಲ್ಲಿಸಿದ್ದಾರೆ.