ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ವಿಕೃತಕಾಮಿ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ತಾಯಿ ಮಗಳು ಸ್ನಾನ ಮಾಡುವ ವಿಡಿಯೋ ಮಾಡುತ್ತಿದ್ದ ಆರೋಪಿ ಮೊಯೀನುದ್ದಿನ್ ಎಂಬ ಆರೋಪಿಯನ್ನು ಇದೀಗ ಪೊಲೀಸ್ ಮಾಡಿದ್ದಾರೆ.
ಹೌದು ತಾಯಿ ಮಗಳು ಸ್ನಾನ ಮಾಡುವಾಗ ಕದ್ದು ಮುಚ್ಚಿ ಕಾಮುಕನೊಬ್ಬ ವಿಡಿಯೋ ಮಾಡುತ್ತಿದ್ದ. ಕಾಡುಗೊಡಿಯ ಚನ್ನಸಂದ್ರ ದಲ್ಲಿ ಒಂದು ಘಟನೆ ನಡೆದಿದ್ದು, ಕಾಡುಗೋಡಿ ಪೊಲೀಸರು ಇದೀಗ ಮೊಯೀನುದ್ದಿನ್ ನನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಮಂಗಳವಾರ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಮೊಬೈಲ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿ ಕಾಮುಕನನ್ನು ಜೈಲಿಗೆ ಅಟ್ಟಿದ್ದಾರೆ.
ಕೇರಳ ಮೂಲದ ಹಾಜ ಮೊಹಿದ್ದಿನ್ (24) ಬಂಧಿತ. ಈತ ಜುಲೈ 8ರಂದು ಚನ್ನಸಂದ್ರದ ಮನೆಯೊಂದರ ಬಳಿ ಹೋಗಿ ಮಹಿಳೆ ಮತ್ತು ಆಕೆಯ 8 ವರ್ಷದ ಮಗಳ ಜತೆ ಸ್ನಾನ ಮಾಡುವಾಗ ಮೊಬೈಲ್‌ನಿಂದ ವಿಡಿಯೋ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜುಲೈ 8ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಚನ್ನಸಂದ್ರ ಮುಖ್ಯರಸ್ತೆ ಪಕ್ಕದಲ್ಲಿರುವ ಟೆಕ್ಕಿಯೊಬ್ಬರ ಮನೆಯ ಸ್ನಾನದ ಕೋಣೆ ಬಳಿ ಹೋಗಿದ್ದ ಆರೋಪಿ, ಮಹಿಳೆ ತನ್ನ ಮಗಳ ಜತೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆರೋಪಿ ಕಿಟಕಿ ಮೇಲೆ ಮೊಬೈಲ್ ಇಟ್ಟು ಸೆರೆ ಹಿಡಿಯುತ್ತಿದ್ದ. ಇದನ್ನು ಗಮನಿಸಿದ ಬಾಲಕಿ ಜೋರಾಗಿ ಕೂಗಿಕೊಂಡು, ತಾಯಿಗೆ ಹೇಳಿದ್ದಳು. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.