ಬೆಂಗಳೂರು : ಸಮಾಜದಲ್ಲಿ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಯಾರು ಕೈ ಚಾಚಬಾರದು. ಹೀಗಾಗಿ ಎಲ್ಲರಿಗೂ ಅನ್ನ ಕೊಟ್ಟಿದ್ದೇನೆ. ಸುಮ್ಮನೆ ಕೊಟ್ಟಿಲ್ಲ ಎಂದು ಅನ್ನಭಾಗ್ಯ ಯೋಜನೆ ಕುರಿತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹಲ್ಯಾಬಾಯಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನೆಂಟ್ರು ಹಬ್ಬ ಬಂದ್ರೆ ಮಾತ್ರ ನಾವು ಅನ್ನ ಅನ್ನ ಉಣ್ಣುತ್ತಿದ್ದೆವು. ಊರಲ್ಲಿ 20% ಮಾತ್ರ ನೀರಾವರಿ ಜಮೀನಿತ್ತು. ನಮ್ಮ ಮನೆಯಲ್ಲಿ ಕೂಡ ಸ್ವಲ್ಪ ನೀರಾವರಿ ಜಮೀನು ಇತ್ತು. ಮಕ್ಕಳಿಗೆ ಭೇದಿಯಾದರೆ ಹುಷಾರಿಲ್ಲದಿದ್ದರೆ ಅನ್ನ ಕೊಡುತ್ತಿದ್ದರು ಪಕ್ಕದ ಮನೆಯವರು ತುತ್ತು ಅನ್ನಕ್ಕೆ ನಿಂತುಕೊಂಡಿರುವರು. ನಮ್ಮ ಮನೆಯಲ್ಲಿ ಅನ್ನ ಕೇಳುವುದಕ್ಕೆ ಬರ್ತಾ ಇದ್ದರು. ಇದನ್ನ ನಾನು ಕಣ್ಣಾರೆ ನೋಡಿದ್ದೇನೆ. ಯಾರು ಕೂಡ ಅನ್ನ ಸಿಗದೇ ಇರಬಾರದು ಅಂದ ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಅನುಭವದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದೆ. ಅನ್ನ ಮಾಡಿ ಊಟ ಮಾಡಿ ಮಾಡುತ್ತಿದ್ದೆವು. ಸಾಂಬಾರ್ ಹೋಟೆಲ್ ನಿಂದ ತರುತ್ತಿದ್ವಿ. ಹೀಗಾಗಿ ನಾವು ವಿದ್ಯಾಸಿರಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಒಂದು ತಿಂಗಳಿಗೆ 1,500 ಕೊಡುತ್ತಿದ್ದೇವೆ ಆರ್ಥಿಕವಾಗಿ ಸಹಾಯ ಮಾಡಿದರೆ ಸೋಮಾರಿ ಆಗ್ತಾರಾ? ಇದು ಸಾಧ್ಯವಾ? 1.23 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2000 ನೀಡುತ್ತಿದ್ದೇವೆ ಇದು ಸಹಾಯ ಆಗುತ್ತೆ ಅಲ್ವಾ. ಆರ್ಥಿಕವಾಗಿ ಸಹಾಯ ಆಗುತ್ತೆ ತಾನೇ? ಇಲ್ಲ ಅಂದ್ರೆ ಗಂಡನ ಮುಂದೆ ಕಾಯ್ತಾ ಕೂರಬೇಕು.
ಹಾಗಾಗಿ ಗೃಹಲಕ್ಷ್ಮಿ, ಗೃಹಜೋತಿ ಕಾರ್ಯಕ್ರಮ ಜಾರಿ ಮಾಡಿದೆ. ಉಚಿತ ಗ್ಯಾರಂಟಿಯಿಂದ ಜನ ಸೋಮಾರಿ ಆಗ್ತಾರೆ ಅಂತಾರೆ ಬಸ್ನಲ್ಲಿ ಓಡಾಡು ಮಹಿಳೆಯರು ಸೋಮಾರಿಗಳಾಗಿದ್ದಾರ? ಗ್ಯಾರೆಂಟಿಗಳಿಂದ ಇನ್ನೂ ಆಕ್ಟಿವ್ ಆಗ್ತಿವಿ ಅಂತ ಹೇಳ್ತಾರೆ. ಈ ಹಿಂದೆ ಬಿಜೆಪಿ ಶಾಸಕ ಉಚಿತ ಅಕ್ಕಿಯ ಬಗ್ಗೆ ಪ್ರಶ್ನಿಸಿದರು. ಉಚಿತ ಅಕ್ಕಿ ಕೊಟ್ಟಿದ್ದಕ್ಕೆ ಕೆಲಸಕ್ಕೆ ಜನ ಬರ್ತಿಲ್ಲ ಅಂದರು. ನಾನು ಹಸಿವಿನಿಂದ ಬಡವರು ಮಲಗಬಾರದು ಎಂದಿದ್ದೆ.. ಸೋಮಾರಿಗಳ ಆದರೆ ಆಗಲಿ ನೀವು ದಿನಾ ಕೆಲಸ ಮಾಡಿ ಸೋಮಾರಿಗಳಾಗ್ರಪ್ಪಾ ಎಂದಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.