ಬಾಗಲಕೋಟೆ : ಒಂದು ಕಡೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲು ಕೆಲವು ಪ್ರಮುಖ ಸಚಿವರು ಪಟ್ಟು ಹಿಡಿಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ ವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ. ಇದರನ ಬೆನ್ನಲ್ಲೇ ಶಾಸಕ ವಿಜಯಾನಂದ ಬಿಜೆಪಿಯ ಹೈಕಮಾಂಡ್ ಗೆ ಕಾಂಗ್ರೆಸ್ 55 ಶಾಸಕರ ಲಿಸ್ಟ್ ಇದ್ದು ಅದರಲ್ಲಿ ನನ್ನ ಹೆಸರು ಕೂಡ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಒಂದು ಹೇಳಿಕೆ ನೀಡಿದ್ದು, ಬಿಜೆಪಿ ಹೈ ಕಮಾಂಡ್ಗೆ ಕಾಂಗ್ರೆಸ್ಸಿನ 55 ಶಾಸಕರ ಟಾರ್ಗೆಟ್ ಲಿಸ್ಟ್ ನಲ್ಲಿ ನಾನು ಇದ್ದರೂ ಇರಬಹುದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದಿಂದ ಶಾಸಕರ ಖರೀದಿ ಆಗುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಬಿಜೆಪಿ ಅವರ ಬೆದರಿಕೆಗೆ ನಾನು ಹೆದರಲ್ಲ ಬಗ್ಗಿಲ್ಲ ಬಿಜೆಪಿಯವರು ಒಮ್ಮೆಯು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಸಮ್ಮಿಶ್ರ ಸರ್ಕಾರ ಹಿಂಭಾಗಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ.
ಕಳೆದ ವರ್ಷ ಹಣಕೊಟ್ಟು ಅಧಿಕಾರಕ್ಕೆ ಬಂದಿದ್ದರು. ಜನರಿಗೆ ಗೊತ್ತಿದೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು. ರಾಜ್ಯದ ಜನತೆಗೆ ಗೊತ್ತಿದೆ ಹಾಗಾಗಿಯೇ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಎಂದಿಗೂ ಕೂಡ ಅದೇ ತಂತ್ರವನ್ನು ಹೂಡುತ್ತಿದ್ದಾರೆ. ಯಾರನ್ನಾದರೂ ಎತ್ತಿ ಕಟ್ಟಿ ಸರ್ಕಾರ ಬಿಳಿಸುವ ಪ್ರಯತ್ನ ಮಾಡುವುದು ಬಿಜೆಪಿ ಅವರು ಕಾಂಗ್ರೆಸ್ಸಿನ 55 ಶಾಸಕರ ಪಟ್ಟಿ ಸಿದ್ದಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರ ಮೇಲೆ ಸಿಬಿಐ ಮತ್ತು ಇಡಿ ದಾಳಿ ಮೂಲಕ ಬೆದರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ತೊರೆದ್ ಬಿಜೆಪಿಗೆ ಬರೆದಿದ್ದರೆ ಇಡಿ ಮತ್ತು ಸಿಬಿಐ ದಾಳಿ ಮಾಡಿಸುತ್ತಾರೆ ಎಂದು ವಿಜಯಾನಂದ ಕಾಶಪ್ಪನವರ್ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.
ನಾನು ಸೇರಿದಂತೆ ನಮ್ಮೆಲ್ಲ ಶಾಸಕರಿಗೆ ಇಡಿ ಮತ್ತು ಸಿಬಿಐ ದಾಳಿಯ ಭೀತಿ ಇದೆ. ಈಗಾಗಲೇ ಬಿಜೆಪಿಯವರು ತಮ್ಮ ಏಜೆಂಟರನ್ನು ಕಳಿಸಿ ಬೆದರಿಸಿದ್ದಾರೆ ಅಕ್ರಮ ಆಸ್ತಿ ಬಹಿರಂಗಪಡಿಸುತ್ತೇವೆ ಅಂತಾರೆ ನನ್ನ ಮೇಲೆ ಇಡಿ ಮತ್ತು ಐಟಿ ಸೇರಿದಂತೆ ಯಾವುದೇ ದಾಳಿ ಮಾಡಿದರು ಎಲ್ಲವನ್ನು ಎದುರಿಸಲು ಸಜ್ಜಾಗಿದ್ದಾನೆ. ಈಗಾಗಲೇ ಶಾಸಕ ಭರತ್ ರೆಡ್ಡಿ, ಬಿ.ನಾಗೇಂದ್ರ, ಸಂಸದ ಇ ತುಕಾರಾಂ ಮನೆ ಮೇಲೆ ದಾಳಿ ಮಾಡಲಾಗಿದೆ. ಇದೆಲ್ಲ ಉದ್ದೇಶಪೂರ್ವಕ ಮತ್ತು ದ್ವೇಷ ರಾಜಕಾರಣ ಕುತಂತ್ರ ರಾಜಕಾರಣವಾಗಿದೆ ಬಿಜೆಪಿ ಅವರಿಗೆ ಧಮ್ ತಾಕತ್ತಿದ್ದರೆ 220 ಚುನಾವಣೆ ಯಲ್ಲಿ ಗೆಲ್ಲಲಿ ಸ್ವತಂತ್ರವಾಗಿ ಸ್ಪಷ್ಟ ಬಹುಮತದಿಂದ ಬಿಜೆಪಿ ಅವರು ಗೆದ್ದು ಅಧಿಕಾರಕ್ಕೆ ಬರಲಿ ಎಂದು ವಿಜಯಾನಂದ ಕಾಶಪ್ಪನವರು ಹೇಳಿಕೆ ನೀಡಿದರು.