ಬೆಂಗಳೂರು : ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇತ್ತೀಚಿಗೆ ಜಾರಿ ನಿರ್ದೇಶನಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಕುರಿತು ಸುಬ್ಬಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು ನನ್ನ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ಮಾಡಲಾಗಿದೆ ಬೆಂಗಳೂರು ಬಿಟ್ಟರೆ ವಿದೇಶಗಳಲ್ಲಿ ನಯಾಪೈಸೆ ಹಣವಿಲ್ಲ ಎಂದು ಪ್ರತಿಕ್ರಿಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ನಾನು ಒಂದಿಂಚು ಆಸ್ತಿಯನ್ನು ಮಾಡಿಲ್ಲ. ನನ್ನ ಹೆಸರಿನಲ್ಲಿ ನಕಲಿ ಬ್ಯಾಂಕ್ ದಾಖಲೆಗಳನ್ನು ಸೃಷ್ಟಿಸಲಾಗಿದೆ. ನಕಲಿ ಹಣ ವರ್ಗಾವಣೆ ಸೃಷ್ಟಿಸಲಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ಆರೋಪಿಸಿದ್ದಾರೆ. ವಿದೇಶಗಳಲ್ಲಿ ನಾನು ಹಣ ಹೂಡಿಕೆ ಮಾಡಿದ್ದೇನೆ ಎಂದು ಅಧಿಕಾರಿಗಳು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ವಿದೇಶಗಳಲ್ಲಿ ಒಂದು ಡಾಲರ್ ನಷ್ಟು ಪ್ರಾಪರ್ಟಿ ಇದ್ದರೆ ನಾನು ಇಷ್ಟು ದಿನ ಸಂಪಾದನೆ ಮಾಡಿರುವ ಆಸ್ತಿಯನ್ನು ಸರ್ಕಾರ ಮುಟ್ಟುಕೊಳ್ಳಲು ಹಾಕಿಕೊಳ್ಳಲಿ ಎಂದು ಆಫೀಡಿವೇಟ್ ಬರೆದುಕೊಡ್ತೀನಿ ಎಂದು ಸವಾಲು ಹಾಕಿದರು.
ನಾನು ಖಂಡಿತವಾಗಿಯೂ ವಿದೇಶದಲ್ಲಿ ಯಾವುದೇ ನಾನು ಇನ್ವೆಸ್ಟ್ ಮಾಡಿಲ್ಲ. ನನ್ನದೇನಿದ್ದರೂ ಬೆಂಗಳೂರು ಬಾಗೇಪಲ್ಲಿ ಅಷ್ಟೇ ನಾವು ಬಿಸಿನೆಸ್ ಮಾಡುವಂತಹ ಜನ 130 ಕೋಟಿ ಬಿಸಿನೆಸ್ ಟರ್ನ್ ಓವರ್ ಇದೆ. ಒಂದು ಕಾರು ತೆಗೆದುಕೊಂಡರೆ ತಪ್ಪೇನು ಇಲ್ಲ ಎನ್ನುವುದು ನನ್ನ ಭಾವನೆ. ದುಬಾರಿ ಬೆಳೆ ಬಾಳುವ ಕಾರನ್ನು ನಾನು ಇಟ್ಟುಕೊಂಡಿದ್ದೇನೆ ಅದು ತಪ್ಪದೆ ಯಾರು ಏನು ಮಾಡಕ್ಕಾಗಲ್ಲ. ಇದನ್ನು ಬಿಟ್ಟರೆ ವಿದೇಶಗಳಲ್ಲಿ ನಯಾ ಪೈಸೆ ಹಣವಿಲ್ಲ ಸರ್ಕಾರಕ್ಕೆ ನ್ಯಾಯಪಯಿಸಿದ ಮೋಸ ಮಾಡಿದರು ನನ್ನ ಮೇಲೆ ಏನು ಬೇಕಾದರೂ ಈಡೇ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದರು.