ಬೆಂಗಳೂರು : ಮುಂದಿನ 10 ದಿನಗಳಲ್ಲಿ ನಿಗಮ ಮಂಡಳಿ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತೆ ರಾಜಕ್ಕೆ ಆಗಮಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ನಿನ್ನೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ಭರ್ತಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಕ್ಷದ ಸಂಘಟನೆ ವಿಚಾರದಲ್ಲಿ ಏನೆಲ್ಲಾ ಖಾಲಿ ಇದೆ, ತುಂಬಬೇಕು. ಮುಂದಿನ ಹತ್ತು ದಿನದಲ್ಲಿ ತುಂಬಲಿದ್ದೇವೆ. ಸುರ್ಜೇವಾಲ ಮತ್ತೆ ಬೆಂಗಳೂರಿಗೆ ಬರಲಿದ್ದಾರೆ. ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಪಕ್ಷದ ಕಾರ್ಯಕರ್ತರಿದ್ದಾರೆ, ಅವರನ್ನೂ ನೇಮಕ ಮಾಡುವ ಕೆಲಸ ಆಗಲಿದೆ ಎಂದರು.
ಇನ್ನು ದೆಹಲಿಗೆ ಹೋಗಿ ಬಂದ ಬಳಿಕ, ನೀರಾವರಿ ನಿಗಮದ ಬಗ್ಗೆ ತಿಳಿಸಿದ್ದೇವೆ. ಕೃಷ್ಣಾ, ಎತ್ತಿನಹೊಳೆ, ಕಳಸಬಂಡೂರಿ, ಮೇಕೆದಾಟು ಯೋಜನೆ ಏನೆಲ್ಲಾ ಪ್ರಸ್ತಾವನೆ ಇದೆಯೋ ಅದನ್ನು ತಿಳಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.