ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿತ್ತು. ಆದರೆ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ವಿಚಾರಗಳಿಗೆ ತಿಲಾಂಜಲಿ ಇಟ್ಟಿದ್ದು, 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಅಲ್ಲದೆ 2028ರಲ್ಲೂ ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಇತ್ತ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹಲವು ಶಾಸಕರು ಹೇಳಿಕೆ ನೀಡಿದ್ದರು. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್ ಅವರ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಏನೇ ಹೇಳಿದರೂ ಕೂಡ ಮನಸಲ್ಲಿ ಸಿಎಂ ಕುರ್ಚಿಗಾಗಿ ಯಾವುದೇ ನಾಯಕನಿರಲಿ ಆಸೆ ಇದ್ದೇ ಇರುತ್ತದೆ. ಇದೀಗ ಬೆಂಗಳೂರಿನಲ್ಲಿ ಕಾರ್ಯಕ್ರಮ ಒಂದರಲ್ಲಿ ನಾವು ಚೇರ್ ಗಾಗಿ ಬಡದಾಡುತ್ತಿದ್ದೇವೆ ನೀವು ಚೇರ್ ಬೇಡ ಅಂತಿದ್ದೀರಾ ಬಂದು ಕುರ್ಚಿಯಲ್ಲಿ ಕೂತ್ಕೊಳ್ಳಿ ಎಂದು ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಹೌದು ಬೆಂಗಳೂರಿನಲ್ಲಿ ವಕೀಲರ ಸಂಘ ಆಯೋಜಿಸಿರುವ ಕೆಂಪೇಗೌಡ ಜಯಂತಿಯ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ಕುರ್ಚೆ ಕುರಿತು ಮಾತನಾಡಿದ್ದಾರೆ.ಸಿಟಿ ಸಿವಿಲ್ ಕೋರ್ಟ್ ಅವರಣದಲ್ಲಿ ಕೆಂಪೇಗೌಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಕುರ್ಚಿ ಕದನದ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದು, ನಾವೆಲ್ಲ ಕುರ್ಚಿಗಾಗಿ ಬಡಿದಾಡುತ್ತಿದ್ದೇವೆ. ನೀವು ಚೇರ್ ಬೇಡ ಅಂತಿದ್ದೀರಾ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳಿ. ಚೇರ್ ಸಿಗೋದೇ ಕಷ್ಟ ಅಂತದರಲ್ಲಿ ನೀವೆಲ್ಲ ಥಟ್ಟನೆ ಬಂದು ಕುರ್ಚಿಯಲ್ಲಿ ಕೂರುವುದನ್ನು ಕಲಿಯಬೇಕು. ನೋಡಿದರೆ ನೀವೆಲ್ಲ ತರಹ ಕಾಣುತ್ತಿದ್ದೀರಾ ಎಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.