ಕಲಬುರ್ಗಿ : ಕಲಬುರ್ಗಿಯಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ನುಗ್ಗಿ ದರೋಡೆ ನಡೆಸಲಾಗಿದೆ. ಕಲ್ಬುರ್ಗಿ ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಸರಫ್ ಬಜಾರ್ ನಲ್ಲಿ ಮಾಲಿಕ್ ಜ್ಯುವೆಲರಿ ಅಂಗಡಿಗೆ ನುಗ್ಗಿ ಗನ್ ತೋರಿಸಿ ಬೆದರಿಸಿ ದರೋಡೆ ನಡೆಸಿದ್ದಾರೆ.
ಹೌದು ಕಲ್ಬುರ್ಗಿಯ ಸರಾಫ್ ಬಜಾರ್ ನಲ್ಲಿ ಈ ಒಂದು ದರೋಡೆ ನಡೆದಿದೆ. ಮಾಲಿಕ್ ಜುವೆಲರ್ಸ್ ನಲ್ಲಿ ಗನ್ ಹಿಡಿದು ಹಾಡ ಹಗಲೇ ದರೋಡೆ ನಡೆಸಲಾಗಿದ್ದು, ಏಕಾಏಕಿ ನಾಲ್ವರ ಗ್ಯಾಂಗ್ ಅಂಗಡಿಗೆ ನುಗ್ಗಿ ಚಿನ್ನಾಭರಣ ದೋಚಿದೆ. ಸದ್ಯ ಘಟನಾ ಸ್ಥಳಕ್ಕೆ ಕಲ್ಬುರ್ಗಿ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರರಿಂದ ಈ ಕೃತ್ಯ ತೆಗೆದುರಿಸಿ ದರೋಡೆಸಿದರೆ ಸುಮಾರು ಎರಡರಿಂದ ಮೂರು ಕೆಜಿ ಚಿನ್ನ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.