ಬೆಂಗಳೂರು : ದಕ್ಷಿಣ ಭಾರತದ ಬಹುತೇಕ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸಿರ್ ಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಎಸ್ಐ ಚಾನ್ ಪಾಷಾ ವೈದ್ಯ ನಾಗರಾಜ್ ಹಾಗು ಜುನೈದ್ ತಾಯಿ ಫಾತಿಮಾ ಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಹಲವು ಮತ್ತಷ್ಟು ಸ್ಪೋಟಕ ಅಂಶಗಳು ಬಹಿರಂಗವಾಗಿವೆ.
ಹೌದು ಉಗ್ರ ನಾಸಿರ್ ಗೆ ನೆರವು ನೀಡಿದ ಆರೋಪದಲ್ಲಿ ಎನ್ಐಎ ವಿಚಾರಣೆ ನಡೆಸುತ್ತಿದ್ದು, ಬಂಧಿತರ ಬ್ಯಾಂಕ್ ಅಕೌಂಟ್ ಗೆ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿದೆ ಎನ್ನುವುದು ಬೆಳಕಿಗೆ ಬಂದಿದೆ. ಬೇರೆ ಬೇರೆ ಮೂಲಗಳಿಂದ ಹಂತ ಹಂತವಾಗಿ ಲಕ್ಷಾಂತರ ಹಣ ವರ್ಗಾವಣೆ ಆಗಿದ್ದು, ವೈದ್ಯ ನಾಗರಾಜ್ ಆಪ್ತ ಸಹಾಯಕಿಯ ಖಾತೆಯಲ್ಲಿ 70 ಲಕ್ಷ ಹಣ ಪತ್ತೆಯಾಗಿದೆ, ಡಾಕ್ಟರ್ ನಾಗರಾಜ್ ಚಾನ್ ಪಾಷಾ ಅಕೌಂಟಿಗೆ ಲಕ್ಷಾಂತರ ಹಣ ವರ್ಗಾವಣೆ ಆಗಿದೆ. ಹಾಗಾಗಿ ಆರೋಪಿಗಳ ಆಧಾರ್ ಕಾರ್ಡ ಮತ್ತು ಪ್ಯಾನ್ ಕಾರ್ಡ್ ಪರಿಶೀಲನೆ ಮಾಡಲಾಗಿದೆ.
ಪ್ಯಾನ್ ಕಾರ್ಡ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳನ್ನು ಎನ್ಐಎ ಪರಿಶೀಲನೆ ಮಾಡುತ್ತಿದ್ದು, ಚಾನ್ ಪಾಷಾ ತನ್ನ ಮಗನ ಅಕೌಂಟ್ಗೆ ಕೂಡ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲದೆ ಜೈಲ್ನಲ್ಲಿ ಡಾಕ್ಟರ್ ಕೆಲಸ ಮಾಡೋದು ಬಿಟ್ಟು ನಾಗರಾಜ್ ಕಳ್ಳಾಟ ಮಾಡುತ್ತಿದ್ದ. ಆರೋಪಿಗಳಿಗೆ ಚಿಕಿತ್ಸೆ ನೆಪದಲ್ಲಿ ನಾಗರಾಜ್ ಭೇಟಿ ಮಾಡುತ್ತಿದ್ದು, ಚಿಕಿತ್ಸೆ ನೆಪದಲ್ಲಿ ಸಂಪರ್ಕ ಮಾಡಿ ಕೀಪ್ಯಾಡ್ ಮೊಬೈಲ್, ಆಂಡ್ರಾಯ್ಡ್ ಮೊಬೈಲ್ ಸಹ ಪೂರೈಕೆ ಮಾಡುತ್ತಿದ್ದ. ಕುಟುಂಬದವರ ಜೊತೆಗೆ ಮಾತನಾಡಲು ಈತ ಕೈದಿಗಳಿಗೆ ಸಹಾಯ ಮಾಡುತ್ತಿದ್ದ ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ನಾಗರಾಜ್ ವ್ಯವಸ್ಥೆ ಇಷ್ಟೇ ಮಾಡಿದ್ದ ಎಂದು ತಿಳಿದುಬಂದಿದೆ.