ಬೆಂಗಳೂರು : ಬೆಂಗಳೂರಿನ ಪೀಠೋಪಕರಣ ವ್ಯಾಪಾರಿಯೊಬ್ಬರಿಗೆ ಭೂಗತ ಪಾತಕಿ ಲ್ಯಾರೆನ್ಸ್ ಬಿಷ್ಟೋಯಿ ಹೆಸರಿನಲ್ಲಿ ಬೆದರಿಸಿ ₹1 ಕೋಟಿ ಹಣ ವಸೂಲಿಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ವ್ಯಾಪಾರಿಗೆ ಪಾತಕಿ ಬಿಷ್ಟೋಯಿ ಹೆಸರಿನಲ್ಲಿ ಬೆದರಿಕೆ ಕರೆಬಂದಿದ್ದು, ಈ ಬಗ್ಗೆ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಷ್ಟೋಯಿ ಹೆಸರು ಬಳಸಿ ಕೊಂಡು ವ್ಯಾಪಾರಿಗೆ ಪರಿಚಿತರು ಬೆದರಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಬಿಷ್ಟೋಯಿ ಹೆಸರು ಕೇಳಿ ಬಂದಿತ್ತು. 2 ದಿನಗಳ ಹಿಂದೆ ಉದ್ಯಮಿಗೆ ಕರೆ ಮಾಡಿದ್ದ ಅಪರಿಚಿತ, ತನ್ನನ್ನು ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ತಮಗೆ 1 ಕೋಟಿ ಕೊಡದೆ ಹೋದರೆ ಮಗನನ್ನು ಅಪಹರಿ ಸುವುದಾಗಿ ಬೆದರಿಸಿದ್ದಾನೆ ಎಂದು ತಿಳಿದು ಬಂದಿದೆ.