ಹಾಸನ : ಹಾಸನದಲ್ಲಿ ಡಬರ್ ಮರ್ಡರ್ ನಡೆದಿದ್ದು ಆಸ್ತಿ ವಿಚಾರಕ್ಕೆ ಸಹೋದರನೇ ತಂದೆ, ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಅಣ್ಣ, ತಮ್ಮ ಹಾಗೂ ತಂದೆಯ ನಡುವೆ ಗಲಾಟೆ ನಡೆದಿದೆ. ನಂತರ ಗಲಾಟೆ ತಾರಕಕ್ಕೇರಿ ತಂದೆ ಹಾಗೂ ಅಣ್ಣನನ್ನೇ ತಮ್ಮ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ತಂದೆ ದೇವೇಗೌಡ ಹಾಗೂ ಅಣ್ಣ ಮಂಜುನಾಥ್ ನನ್ನು ಮೋಹನ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.