ನವದೆಹಲಿ : 50 ರೂಪಾಯಿ ನಾಣ್ಯದ ಬಗ್ಗೆ ದೊಡ್ಡ ಸುದ್ದಿ ಇದೆ. ಬಹಳ ದಿನಗಳಿಂದ ಜನರು ಮಾರುಕಟ್ಟೆಯಲ್ಲಿ ಹೊಸ 50 ರೂಪಾಯಿ ನಾಣ್ಯವನ್ನ ಪರಿಚಯಿಸಲಾಗುವುದು ಎಂದು ಭಾವಿಸುತ್ತಿದ್ದರು. ಆದ್ರೆ, ಈಗ ಕೇಂದ್ರ ಸರ್ಕಾರವು 50 ರೂಪಾಯಿ ನಾಣ್ಯವನ್ನ ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ವಾಸ್ತವವಾಗಿ, ಪ್ರಸ್ತುತ ಮಾರುಕಟ್ಟೆಯಲ್ಲಿ 50 ರೂಪಾಯಿ ನಾಣ್ಯವನ್ನ ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೃಷ್ಟಿಹೀನರಿಗಾಗಿ 50 ರೂಪಾಯಿ ನಾಣ್ಯಗಳನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಇದನ್ನು ಹೇಳಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ 1, 2, 5, 10, 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ. ಆದರೆ 50 ರೂಪಾಯಿ ನಾಣ್ಯವಿಲ್ಲ.
2022 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಡೆಸಿದ ಸಮೀಕ್ಷೆಯ ಪ್ರಕಾರ, ಜನರು 10 ಮತ್ತು 20 ರೂ. ನಾಣ್ಯಗಳಿಗಿಂತ ಕರೆನ್ಸಿ ನೋಟುಗಳನ್ನ ಬಯಸುತ್ತಾರೆ ಎಂದು ಕಂಡುಬಂದಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ನಾಣ್ಯಗಳ ತೂಕ ಮತ್ತು ದೊಡ್ಡ ಗಾತ್ರದಿಂದಾಗಿ ಜನರು ಅನಾನುಕೂಲತೆಯನ್ನ ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಈ ಕಾರಣದಿಂದಾಗಿ, ಸರ್ಕಾರವು ಪ್ರಸ್ತುತ 50 ರೂ. ನಾಣ್ಯವನ್ನು ಪರಿಚಯಿಸಲು ನಿರ್ಧರಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬೇಡಿಕೆಯ ಆಧಾರದ ಮೇಲೆ ನಾಣ್ಯಗಳನ್ನ ತಯಾರಿಸಲಾಗುತ್ತದೆ.!
ಯಾವುದೇ ಮುಖಬೆಲೆಯ ನಾಣ್ಯವನ್ನ ಪರಿಚಯಿಸುವ ಮೊದಲು, ಜನರು ಅದನ್ನು ಸ್ವೀಕರಿಸಲು ಸಿದ್ಧರಿದ್ದಾರೆಯೇ, ಅದು ದೈನಂದಿನ ವಹಿವಾಟುಗಳಲ್ಲಿ ಉಪಯುಕ್ತವಾಗುತ್ತದೆಯೇ ಇತ್ಯಾದಿ ಹಲವಾರು ಅಂಶಗಳನ್ನ ಪರಿಗಣಿಸಿದ ನಂತರ ಅದರ ತಯಾರಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಅರ್ಜಿಯಲ್ಲಿ ಏನಿದೆ.?
ಹೆಚ್ಚಿನ ನೋಟುಗಳನ್ನ ದೃಷ್ಟಿಹೀನರು ಸುಲಭವಾಗಿ ಗುರುತಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ, ಆದರೆ 50 ರೂ. ನೋಟಿನಲ್ಲಿ ಅಂತಹ ವೈಶಿಷ್ಟ್ಯವಿಲ್ಲ. ಆದ್ದರಿಂದ, ಅಂಧರು ಸಹ ಸುಲಭವಾಗಿ ಗುರುತಿಸಬಹುದಾದ 50 ರೂ. ನಾಣ್ಯವನ್ನು ಪರಿಚಯಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.
ರಿಸರ್ವ್ ಬ್ಯಾಂಕ್ ‘MANI’ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ, ಇದರ ಸಹಾಯದಿಂದ ದೃಷ್ಟಿಹೀನರು ನೋಟುಗಳ ಮೌಲ್ಯವನ್ನ ಗುರುತಿಸಬಹುದು. ಈ ಅಪ್ಲಿಕೇಶನ್’ನೊಂದಿಗೆ, ಬಳಕೆದಾರರು ನೋಟಿನ ಮೇಲೆ ಬರೆದ ಮೊತ್ತವನ್ನ ಕೇಳಬಹುದು. ಹೀಗಾಗಿ, ಪ್ರಸ್ತುತ 50 ರೂಪಾಯಿ ನಾಣ್ಯವನ್ನ ಪರಿಚಯಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
Viral Video : ಬ್ರೆಸಿಲಿಯಾದಲ್ಲಿ ‘ಪ್ರಧಾನಿ ಮೋದಿ’ಗೆ 144 ಕುದುರೆ ಒಳಗೊಂಡ ಭವ್ಯ ಸ್ವಾಗತ, ಮೊಳಗಿದ ಭಾರತೀಯ ಸಂಗೀತ
BREAKING: ರಾಜ್ಯದಲ್ಲಿ ‘ಹೃದಯಾಘಾತ’ ಮರಣ ಮೃದಂಗ: ಇಂದು ಒಂದೇ ದಿನ ಓರ್ವ ಬಾಲಕ ಸೇರಿ 7 ಜನರು ಸಾವು!
‘ನಿವೃತ್ತಿ ಬಳಿಕ ನಾನು ನನ್ನ ಜೀವನವನ್ನ ಇದಕ್ಕಾಗಿ ಮೀಸಲಿಡ್ತೇನೆ’ : ಭವಿಷ್ಯದ ಯೋಜನೆ ಹಂಚಿಕೊಂಡ ‘ಅಮಿತ್ ಶಾ’