ಕಲಬುರ್ಗಿ : ಸಿಸಿರಸ್ತೆ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚಕ್ಕೆ ಬೇಡಿಕೆ ಇಟ್ಟಂತಹ ಪಿ.ಆರ್.ಇ ಜೆಇ ಶ್ರೀಪಾದ ಕುಲಕರ್ಣಿ ಹಾಗು ಪಿಡಿಒ ಮಂಜುಶ್ರೀ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.ಸಚಿವ ಪ್ರಿಯಾಂಕ ಖರ್ಗೆ ಸೂಚನೆಯ ಮೇರೆಗೆ ಅಮಾನತು ಮಾಡಿ ಅದೇಶಿಸಲಾಗಿದೆ.
ಇಲಾಖೆಯ ವಿಚಾರಣೆ ಬಾಕಿ ಇಟ್ಟು ಅಮಾನತು ಅಮಾನತುಗೊಳಿಸಲಾಗಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿತ್ತು. ಈ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಇನ್ನು ವೈರಲ್ ಆದ ವಿಡಿಯೋ ದಲ್ಲಿ 15ನೇ ಹಣಕಾಸಿನ ಯೋಜನೆ ಅಡಿ ಕಾಮಗಾರಿ ನಡೆದಿತ್ತು. ಕಾಮಗಾರಿಗಳಿಗೆ ಜೆಇ ಶ್ರೀಪಾದ್ ಕುಲಕರ್ಣಿ 5% ಲಂಚ ಕೇಳಿದ್ದಾರೆ. ಪಿಡಿಒ ಅವರಿಗೆ 3% ಕೊಡಬೇಕು. ನಾವೇ ಎಸ್ಟಿಮೇಟ್ ಮಾಡುತ್ತೇವೆ. ಎಂಬಿ ಬರೀತೀವಿ. ಎಲ್ಲ ಮಾಡುತ್ತೇವೆ ಟೈಪ್ ಮಾಡಿಸೋದು ಗೊತ್ತು, ಕೆಲಸಕ್ಕೆ ಹೋಗ್ತೇವೆ 10 ಸಲ ಫೋನ್ ಬರುತ್ತವೆ ಎಲ್ಲಾ ಕಡೆಗೂ ಹೋಗುತ್ತವೆ. ಎಲ್ಲಾ ಕೆಲಸ ಮಾಡಿರುತ್ತೇವೆ. ನಾವು ಎಲ್ಲ ಮಾಡಿರುತ್ತೇವೆ ಒಂದು ಬಿಡ್ರಿ ಎರಡು ಬಿಡ್ರಿ ಅಂತ ಅಂದೇ. ಅದಕ್ಕೆ ಪಿಡಿಒ ಮೇಡಂ ನನಗೆ 5% ಬೇಕು ಅಂತ ಅಂದರು ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.