ರಾಜಸ್ಥಾನ : ಇತ್ತೀಚಿಗೆ ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿ ವಿಮಾನ ಪತನಗೊಂಡು 270ಕ್ಕೂ ಹೆಚ್ಚು ಜನರು ಈ ಒಂದು ದುರಂತದಲ್ಲಿ ಸಾವನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ರಾಜಸ್ಥಾನದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದ್ದು ಭಾರತೀಯ ವಾಯುಪಡೆಯ ವಿಮಾನ ಒಂದು ಪತನಗೊಂಡಿರುವ ಘಟನೆ ರಾಜಸ್ಥಾನದ ಚುರುನಲ್ಲಿ ನಡೆದಿದೆ.
ಹೌದು ರಾಜಸ್ಥಾನದಲ್ಲಿ ಭಾರತೀಯ ವಾಯು ಪಡೆಯ ವಿಮಾನ ಪತನವಾಗಿದೆ. ರಾಜಸ್ಥಾನದ ಚುರುನಲ್ಲಿ ವಾಯುಪಡೆಯ ವಿಮಾನ ಪತನವಾಗಿದ್ದು, ವಿಮಾನದ ಅವಶೇಷಗಳ ಅಡಿ ಒಬ್ಬನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಚುರುವಿನಲ್ಲಿ ಬುಧವಾರ ಭಾರತೀಯ ವಾಯುಪಡೆಯ ಜೆಟ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ರತನ್‌ಗಢ್ ತೆಹಸಿಲ್‌ನ ಭಾನೋಡಾ ಗ್ರಾಮದಲ್ಲಿರುವ ರಾಜಲ್ದೇಸರ್ ಪೊಲೀಸ್ ಠಾಣೆಯ ಅಧಿಕಾರಿಗಳು, ಇಬ್ಬರು ಪೈಲಟ್‌ಗಳು ಸ್ಥಳದಲ್ಲಿದ್ದರು ಎಂದು ತಿಳಿಸಿದ್ದಾರೆ.
#BREAKING: IAF Jet Crashes In Rajasthan's Churu. More Details Awaited#IAF #JetCrash #Churu #Crash #Rajasthan pic.twitter.com/xqusRLdYSL
— upuknews (@upuknews1) July 9, 2025