ಮಂಡ್ಯ : ಮಂಡ್ಯದಲ್ಲಿ ನಿನ್ನೆ ತಡರಾತ್ರಿ ಘೋರ ದುರಂತ ನಡೆದಿದ್ದು, ಕಾವೇರಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ತಡರಾತ್ರಿ ಒಂದು ಘಟನೆ ನಡೆದಿದೆ.
ಹಾಸನ ಮೂಲದ ಸಿಂಚನ (23) ನದಿಗೆ ಹಾರಿದ ಯುವತಿ ಎಂದು ತಿಳಿದುಬಂದಿದೆ. ಯುವತಿ ನದಿಗೆ ಹಾರಿದ ಬಗ್ಗೆ ಸ್ಥಳೀಯರು ಕೂಡಲೇ ಪೊಲೀಸರಿಗೆ ತಿಳಿಸಿದರು. ಯುವತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಅಗ್ನಿಶಾಮಕ ದಳ ಹಾಗೂ ಪೋಲೀಸರು ಯುವತಿಗಾಗಿ ಶೋಧ ಕಾರ್ಯಕ್ರಮ ಮುಂದುವರೆಸಿದ್ದಾರೆ. ಯುವತಿಯ ಶೋಧ ಕಾರ್ಯಕ್ಕೆ ಭಾರಿ ಪ್ರಮಾಣದ ನೀರು, ಅಡ್ಡಿಯಾಗಿದೆ.