ಬೆಂಗಳೂರು : ರಾಜ್ಯದಲ್ಲಿ ಯುವಜನತೆಗೆ ಹೃದಯ ಸ್ತಂಭದನ ಆಘಾತ ಎದುರಾಗಿದ್ದು, ಇಂದು ಒಂದೇ ದಿನ ಮೂವರು ಚಿಕ್ಕ ವಯಸ್ಸಿನವರು ಬಲಿಯಾಗಿದ್ದಾರೆ.
ಕನಕಪುರದ ತಾಲೂಕಿನ ಕೊಗ್ಗೆ ದೊಡ್ಡಿ ಗ್ರಾಮದ 38 ವರ್ಷದ ಮಾದೇಶ್ ನಾಯ್ಕ್ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಫಾರೆಸ್ಟ್ ಗಾರ್ಡ್ ಆಗಿ ಮಾದೇಶ ಕೆಲಸ ಮಾಡುತ್ತಿದ್ದು.
ಧಾರವಾಡದಲ್ಲಿ 25 ವರ್ಷದ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುರೋಹಿತ ನಗರದ ಜೀವಿತಾ ಕುಸಗೂರು ಸಾವನ್ನಪ್ಪಿದ್ದಾರೆ.
ದಾವಣಗೆರೆಯ ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸಂಭವಿಸುವ ಹಠಾತ್ ಸಾವನ್ನು ಇನ್ನು ಮುಂದೆ ಅಧಿಸೂಚಿತ ಕಾಯಿಲೆ ಎಂದು ಪರಿಗಣಿಸಲು ಹಾಗೂ ಆಸ್ಪತ್ರೆಯಿಂದ ಹೊರಗೆ ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.