ಬೆಂಗಳೂರು : ರಾಜ್ಯದಲ್ಲಿ ಎನ್ ಐಎ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿದೆ.
ರಾಜ್ಯದ ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯ ಐದು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್, ಉತ್ತರ ವಿಭಾಗದ ನಗರ ಶಶಸ್ತ್ರ ಮೀಸಲು ಪಡೆ ಎಎಸ್ಐ ಚಾಂದ್ ಪಾಷಾ ಮತ್ತು ತಲೆ ಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತಿಮಾ ಅವರನ್ನು ಬಂಧಿಸಲಾಗಿದೆ.
NIA Arrests 3 Key Accused following Searches in Karnataka in LeT Prison Radicalisation Case pic.twitter.com/IHLuF501o4
— NIA India (@NIA_India) July 8, 2025
ಕೋಲಾರ ತಾಲೂಕಿಕಿನ ಭಟ್ರಹಳ್ಳಿಯ ಸತೀಶ್ ಗೌಡ ಅವರಿಗೆ ಎನ್ಐಎ ನೋಟಿಸ್ ನೀಡಿದೆ. ಬೆಳಿಗ್ಗೆ 10ಗಂಟೆಗೆ ಗಂಟೆಗೆ ಬೆಂಗಳೂರಿನ ಎನ್ಐಎ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ವೈಟ್ ಫೀಲ್ಡ್ ಬಳಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಗೌಡ ಶಂಕಿತ ಉಗ್ರರಿಗೆ ಮೊಬೈಲ್ ಸಿಮ್ ಕಾರ್ಡ್ ಗಳನ್ನು ನೀಡಿದ ಆರೋಪವಿದೆ. ಸತೀಶ್ ಗೌಡ ಮನೆಯಲ್ಲಿಲ್ಲದ ಕಾರಣ ಅವರ ಕುಟುಂಬದವರಿಗೆ ನೋಟಿಸ್ ನೀಡಲಾಗಿದೆ.