ಮಂಡ್ಯ : ರಾಜ್ಯದಲ್ಲಿ ಪ್ರತಿದಿನ ಹೃದಯಘಾತದಿಂದ ಸಾವನಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಸಹ ರಾಜ್ಯದಲ್ಲಿ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 5 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ವ್ಯಕ್ತಿ ಒಬ್ಬರು ನೀರು ಕುಡಿಯುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ನೀರು ಕುಡಿಯುತ್ತಿದ್ದಾಗ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ನೀರು ಕುಡಿಯುವಾಗಲೇ ಬಿದ್ದು ಪುಟ್ಟಸ್ವಾಮಿ (55) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ.ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿಯಲ್ಲಿ ಈ ಒಂದು ದುರಂತ ನಡೆದಿದೆ. ಜಮೀನಿನಿಂದ ಮೇಕೆಗೆ ಮೇವಿಗೆ ತಂದಿರುತ್ತಾರೆ. ಈ ವೇಳೆ ಮನೆಯವರ ಬಳಿ ನೀರು ಪಡೆದು ನೀರು ಕುಡಿಯುವಾಗಲೇ ಪುಟ್ಟಸ್ವಾಮಿ ಏಕಾಏಕಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.