ಹಾಸನ : ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇಂದು ಕೂಡ ರಾಜ್ಯದಲ್ಲಿ ಹಾಸನ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಹೃದಯಾಘಾತಕ್ಕೆ 5 ಜನರು ಬಲಿಯಾಗಿದ್ದಾರೆ. ಕಳೆದ 46 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನದಲ್ಲಿ ಈ ಒಂದು ಸರಣಿ ಸಾರಿಗೆ ಅತಿಯಾದ ಮಾಂಸ ಸೇವನೆ ಕಾರಣ ಎಂದು ಶಾಸಕ ಎಚ್.ಡಿ ರೇವಣ್ಣ ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ವಿಚಾರವಾಗಿ ಹೃದಯಾಘಾರದಿಂದ ಸರಣಿ ಸಾವುಗಳಿಗೆ ಮಾಂಸಹಾರ ಸೇವನೆಯೇ ಕಾರಣ ಎಂದು ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಚ್.ಡಿ ರೇವಣ್ಣ ಈ ಒಂದು ಹೇಳಿಕೆ ನೀಡಿದ್ದು, ಬೀಗರೂಟದಲ್ಲಿ ಅತಿಯಾಗಿ ರೆಡ್ ಮೀಟ್ ಸೇವನೆ ಮಾಡುತ್ತಿದ್ದಾರೆ ಎಂದರು.
ಅಲ್ಲದೇ ಹಾಸನ ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚಾಗಿದೆ. ಆದಾಯ ಬರುತ್ತೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ. ಬಾರ್ ನಲ್ಲಿ ಕುಡಿದು ಅನಾಹುತವಾಗುತ್ತಿದೆ ಎಂದು ಕಿಡಿಕಾರಿದರು. ವೈದ್ಯರ ಜೊತೆ ಶಾಸಕ ಎಚ್.ಡಿ ರೇವಣ್ಣ ಈ ಎಲ್ಲಾ ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಎಚ್.ಡಿ ರೇವಣ್ಣ ಮಾತನಾಡುತ್ತಿದ್ದಾಗ ಶಾಸಕ ಸಿಎನ್ ಬಾಲಕೃಷ್ಣ ಮಧ್ಯಪ್ರವೇಶಿಸಿ ಹಾಸನ ಜಿಲ್ಲೆಯಲ್ಲಿ ಬಾರ್ ಗಳಿಗೆ ಸಮಯ ನಿಗದಿ ಮಾಡಬೇಕು. ಬೆಳಗ್ಗೆ 10ಕ್ಕೆ ಭಾರತ ತೆರೆದರೆ ರಾತ್ರಿ 8 ಗಂಟೆಗೆ ಕ್ಲೋಸ್ ಮಾಡಲಿ ಶಾಸಕ ಸಿಎನ್ ಬಾಲಕೃಷ್ಣ ಹೇಳಿಕೆ ನೀಡಿದರು. ಜನರ ಜೀವನಶೈಲಿ ಬದಲಾಗಬೇಕು ಎಂದು ಇದೇ ವೇಳೆ ಹಿಮ್ಸ್ ವೈದ್ಯರು ತಿಳಿಸಿದರು.