ತುಮಕೂರು : ತುಮಕೂರಿನಲ್ಲಿ ದಾವಣಗೆರೆ ಪಿಎಸ್ಐ ನಾಗರಾಜಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗನ ವಿಚಾರವಾಗಿ ಮನನೊಂದು ನಾಗರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತುಮಕೂರು ನಗರ ಪೊಲೀಸರ ತನಿಖೆಯ ವೇಳೆ ಈ ಒಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್ಐ ನಾಗರಾಜಪ್ಪ ಬರೆದಿದ್ದ ಡೆತ್ ನೋಟನ್ನು ಪೊಲೀಸರು ಪಡೆದಿದ್ದರು.
ನಾಗರಾಜಯ್ಯ ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತುಮಕೂರಿಗೆ ಬರುವ ಮುನ್ನ ಮನೆಯಲ್ಲಿ ಪಿಎಸ್ಐ ನಾಗರಾಜಪ್ಪ ಜಗಳವಾಡಿದ್ದರು. ಇಂಜಿನಿಯರ್ ಮುಗಿಸಿದ್ದ ಮಗ ಮನೆಯಲ್ಲಿ ಇದ್ದಿದ್ದಕ್ಕೆ ನಾಗರಾಜಪ್ಪ ತೀವ್ರ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ನಾಗರಾಜಪ್ಪ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದಾವಣಗೆರೆಯಿಂದ ತುಮಕೂರಿಗೆ ಬಂದು ಲಾಡ್ಜ್ ನಲ್ಲಿ ನಾಗರಾಜಪ್ಪ ನೇಣಿಗೆ ಶರಣಾಗಿದ್ದಾರೆ.
ಮಗನ ವಿಚಾರವಾಗಿ ಬೇಸರಗೊಂಡು ನಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ಕೆಲಸ ಸಿಗಲಿ ಎಂಬ ಉದ್ದೇಶಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಪಿಎಸ್ಐ ನಾಗರಾಜಪ್ಪ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಪಿಎಸ್ಐ ಆತ್ಮಹತ್ಯೆ ಕೇಸ್ ಶೀಘ್ರದಲ್ಲೇ ದಾವಣಗೆರೆಗೆ ವರ್ಗಾಯಿಸಲಾಗುತ್ತದೆ ದಾವಣಗೆರೆಯ ಕೆಟಿಜೆ ನಾಗರ ಠಾಣೆಗೆ ಪ್ರಕರಣ ವರ್ಗಾವಣೆ ಆಗಲಿದೆ ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ವರದಿ ಬಂದ ಬಳಿಕ ಈ ಒಂದು ಕೇಸ್ ದಾವಣಗೆರೆಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿದು ಬಂದಿದೆ.