ಚೆನ್ನೈ : ತಮಿಳುನಾಡಿನ ಕಡಲೂರು ಜಿಲ್ಲೆಯ ಚೆಮ್ಮನ್ಕುಪ್ಪಂ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಮಾನವರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ವೇಗವಾಗಿ ಬಂದ ರೈಲು ಶಾಲಾ ವ್ಯಾನ್ಗೆ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ.
ಈ ಭೀಕರ ಅಪಘಾತದಲ್ಲಿ ಮೂವರು ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡರು, ಹತ್ತು ಮಕ್ಕಳು ಮತ್ತು ವ್ಯಾನ್ನ ಚಾಲಕ ಗಂಭೀರವಾಗಿ ಗಾಯಗೊಂಡರು. ಶಾಲಾ ವ್ಯಾನ್ ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ, ಚಿದಂಬರಂಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ವ್ಯಾನ್ಗೆ ಡಿಕ್ಕಿ ಹೊಡೆದು ಸುಮಾರು 50 ಮೀಟರ್ಗಳಷ್ಟು ಎಳೆದೊಯ್ದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ವ್ಯಾನ್ ಸಂಪೂರ್ಣವಾಗಿ ನಾಶವಾಯಿತು. ಅಪಘಾತದಲ್ಲಿ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರು. ಆದಾಗ್ಯೂ, ಮಕ್ಕಳ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.