ಹುಬ್ಬಳ್ಳಿ: ಸೋಮಲಾಪುರಂ ಮತ್ತು ರಾಯದುರ್ಗ ನಿಲ್ದಾಣಗಳ ನಡುವಿನ ಬದ್ನಹಳ್ಳುವಿನಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣದ ನಿರ್ಮಾಣಕ್ಕಾಗಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನಲೆಯಲ್ಲಿ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರು ವೇಳಾಪಟ್ಟಿ ಹೊಂದಿಸಲಾಗಿದೆ: ಅವುಗಳ ಮಾಹಿತಿ ಈ ಕೆಳಗಿನಂತಿದೆ.
I. ರೈಲುಗಳ ರದ್ದತಿ:
1. ಜುಲೈ 11, 2025 ರಂದು ಗುಂತಕಲ್ – ಚಿಕ್ಕಜಾಜೂರು ದೈನಂದಿನ ಪ್ಯಾಸೆಂಜರ್ (ಸಂಖ್ಯೆ 57415) ಮತ್ತು ಚಿಕ್ಕಜಾಜೂರು – ಗುಂತಕಲ್ ದೈನಂದಿನ ಪ್ಯಾಸೆಂಜರ್ (57416) ರೈಲುಗಳು ರದ್ದುಗೊಳ್ಳಲಿವೆ.
II. ರೈಲುಗಳ ಭಾಗಶಃ ರದ್ದತಿ:
1. ಜುಲೈ 10 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 57405 ಗುಂತಕಲ್ – ಕದಿರಿದದೇವರಪಲ್ಲಿ ದೈನಂದಿನ ಪ್ಯಾಸೆಂಜರ್ ರೈಲು ಗುಂತಕಲ್ ಮತ್ತು ಕದಿರಿದದೇವರಪಲ್ಲಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಗುಂತಕಲ್ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.
2. ಜುಲೈ 11 ರಂದು ರೈಲು ಸಂಖ್ಯೆ 57406 ಕದಿರಿದೆವರಪಲ್ಲಿ – ತಿರುಪತಿ ದೈನಂದಿನ ಪ್ಯಾಸೆಂಜರ್ ರೈಲು ತನ್ನ ಪ್ರಯಾಣವನ್ನು ಕದಿರಿದೇವರಪಲ್ಲಿ ನಿಲ್ದಾಣದ ಬದಲು ಗುಂತಕಲ್ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ, ಕದಿರಿದೇವರಪಲ್ಲಿ – ಗುಂತಕಲ್ ನಡುವೆ ಪ್ರಯಾಣ ರದ್ದಾಗಿರುತ್ತದೆ.
III. ರೈಲು ನಿಯಂತ್ರಣ:
1. ಜುಲೈ 11 ರಂದು ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು – ಹೊಸಪೇಟೆ ದೈನಂದಿನ ಪ್ಯಾಸೆಂಜರ್ ರೈಲು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
IV. ರೈಲು ಮರು ವೇಳಾಪಟ್ಟಿ:
1. ಜುಲೈ 11 ರಂದು ರೈಲು ಸಂಖ್ಯೆ 56520 ಹೊಸಪೇಟೆ – ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಹೊಸಪೇಟೆಯಿಂದ 30 ನಿಮಿಷ ತಡವಾಗಿ ಪ್ರಾರಂಭವಾಗಲಿದೆ.
BREAKING: ವಿದ್ಯಾರ್ಥಿಯಿಂದ ಹೆಚ್ಚುವರಿಯಾಗಿ ಪಡೆದಿದ್ದ 8 ಲಕ್ಷ ಶುಲ್ಕ ವಾಪಾಸ್ ಗೆ ಜಿಆರ್ ಮೆಡಿಕಲ್ ಕಾಲೇಜಿಗೆ ಆದೇಶ
2030ರ ವೇಳೆಗೆ ‘ಕಾಬೂಲ್’ ನೀರಿನ ಕೊರತೆ ಎದುರಿಸುವ ‘ವಿಶ್ವದ ಮೊದಲ ರಾಜಧಾನಿ’ಯಾಗಲಿದೆ: ವರದಿ | Kabul Water Crisis