ಯಾದಗಿರಿ : ಯಾದಗಿರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಲುಷಿತ ನೀರು ಸೇವನೆ ಮಾಡಿದ್ದರಿಂದ ಒಂದೇ ಗ್ರಾಮದ ಮೂವರು ಸಾವನಪ್ಪಿದ್ದಾರೆ. ವಾಂತಿ ಭೇದಿಯಿಂದ ಮೂವರು ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರನ್ನು ದೇವಕಮ್ಮ ಹುಟ್ಟಿ (48) ವೆಂಕಮ್ಮ (60) ರಾಮಣ್ಣ ಪೂಜಾರಿ (50) ಎನ್ನುವವರು ಸಾವನ್ನಪ್ಪಿದ್ದಾರೆ. ಇದೀಗ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಕಳೆದ 10 ದಿನಗಳ ಹಿಂದೆ ಮೂವರು ವಾಂತಿ ಭೇದಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಫಲಿಸದೆ ಮೂವರು ಸಾವನಪ್ಪಿದ್ದಾರೆ.