ಗದಗ : ಒಂದು ಕಡೆ 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇನ್ನೊಂದು ಕಡೆ ಹಲವು ಮಠಾಧೀಶರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗಲಿ ಅಂತ ಹೇಳಿಕೆ ನೀಡುತ್ತಿದ್ದಾರೆ. ಡಿಕೆಶಿ ಬೆಂಬಲಿತ ಹಲವು ಶಾಸಕರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ಹಾಲು ಕೆಟ್ಟರು ಹಾಲುಮತ ಕೆಡಲ್ಲ. ಅಂಥವರ ಕೈಯಲ್ಲಿ ಅಧಿಕಾರ ಕೊಟ್ಟಿದ್ದೀರಿ ಅಧಿಕಾರ ಬದಲಾಯಿಸುವುದು ಅಷ್ಟು ಸುಲಭವಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರವಾಗಿ ಮೊಹರಂ ಅಲಿ ದೈವ ವಾಣಿ ಭವಿಷ್ಯ ನುಡಿದಿದೆ.
ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಅಂಗವಾಗಿ ನಿನ್ನೆ ಅಲಿ ದೇವರು ದೈವ ಭವಿಷ್ಯ ವಾಣಿಯು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಬಂದಿದೆ. ಹಾಲು ಕೆಟ್ಟರೆ ಹಾಲುಮತ ಕೆಡಲ್ಲ. ಅಂಥವರ ಕೈಯಾಗ ಅಧಿಕಾರ ಸಿಕ್ಕಿದೆ, ನೀವು ಕೊಟ್ಟಿರಿ ಅದನ್ನ ಬದಲಿ ಮಾಡುವುದು ಅಷ್ಟು ಸುಲಭವಲ್ಲ ಬಹಳ ಕಠಿಣ ಐತಿ ಎಂದು ದೇವರ ವಾಣಿ ಕೇಳಿಬಂದಿದೆ ಹಾಲು ಕೆಟ್ರು ಹಾಲುಮತ ಕೆಡಂಗಿಲ್ಲ ಅಂತವ್ರ್ ಕೈಯಾಗ ಅಧಿಕಾರ ಸಿಕ್ಕತಿ ನೀವು ಕೊಟ್ಟಿದ್ದೀರಿ ಅದನ್ನು ಬದಲಿ ಮಾಡುವುದು ಅಷ್ಟು ಸುಲಭ ಅಲ್ಲ ಬಹಳ ಕಠಿಣ ಐತಿ ಅವರಾಗೆ ಅಧಿಕಾರ ಬಿಟ್ರಾ ಇನ್ನೊಬ್ಬರಿಗೆ ಅಧಿಕಾರ ಹೊಕ್ಕತಿ ಅಂತ ಮೊಹರಂ ಆಲಿ ದೈವ ವಾಣಿ ನುಡಿಯಿತು.