ಕೊಪ್ಪಳ : ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ರ್ಯಾವಣಿಕದಲ್ಲಿ ಶನಿವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ನಿಮಗ್ ರಸ್ತೆಗಳು ಬೇಕೆಂದರೆ ಗ್ಯಾರಂಟಿ ಯೋಜನೆ ನಿಲ್ಲುತ್ತವೆ ಅಕ್ಕಿ ಕೊಡಕ್ಕೆ ಆಗಲ್ಲ ಎಂದು ಹೇಳಿಕೆ ನೀಡಿದ್ದರು ಇದರ ಬೆನ್ನೆಲು ಇದೀಗ ಮತ್ತೆ ಬಸವರಾಜ್ ರೆಡ್ಡಿ ಉಲ್ಟಾ ಹೊಡೆದಿದ್ದು ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ. ಅಕಸ್ಮಾತ್ ನಾನು ‘ಸಿಎಂ’ ಆದ್ರೆ ಗ್ಯಾರಂಟಿ ಹೆಚ್ಚಿಸುತ್ತೇನೆ ಎಂದು ಹೇಳಿಕೆ ನೀಡಿದರು.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ ವಿಚಾರವಾಗಿ ಹೈಕಮಾಂಡ್ ನಿರ್ಧಾರವನ್ನು ಬಸವರಾಜ ರಾಯರೆಡ್ಡಿ ಸ್ವಾಗತಿಸಿದರು. ಕೊಪ್ಪಳದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ನಿರ್ಧಾರ ನಾನು ಸ್ವಾಗತಿಸುತ್ತೇನೆ ಎಂದರು.
ಇದೆ ವೇಳೆ ರಸ್ತೆ ಬೇಕೆಂದ್ರೆ ಗ್ಯಾರಂಟಿ ಬಂದ್ ಆಗುತ್ತೆ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಹಾಗೆ ಹೇಳಿಲ್ಲ. ನಾವು ಇಷ್ಟೆಲ್ಲಾ ಮಾಡಿದ್ದೇವೆ ಅಕ್ಕಿ ಕೊಡಲ್ಲ ಅಂತ ನಾನು ಹೇಳಿಲ್ಲ.ಈ ವರ್ಷ ರಸ್ತೆ ಕಾಮಗಾರಿಗೆ 100 ಕೋಟಿ ಅನುದಾನ ಕೊಟ್ಟಿದ್ದೀವಿ. ಇನ್ನು ಹೆಚ್ಚು ಗ್ಯಾರಂಟಿಗಳನ್ನು ಕೊಡ್ತೀವಿ ಎಂದು ಬಸವರಾಜ ರಾಯರೆಡ್ಡಿ ಹೇಳಿದರು ನನ್ನ ಹಣಕಾಸು ಮಂತ್ರಿ ಮಾಡಿದರೆ ಇನ್ನು ಹೆಚ್ಚು ಗ್ಯಾರೆಂಟಿ ಕೊಡ್ತೀನಿ ಅಂತ ಪರೋಕ್ಷವಾಗಿ ಮುಖ್ಯಮಂತ್ರಿ ಆಗೋ ಕನಸು ಬಿಚ್ಚಿಟ್ಟರು.
ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಪ್ರಕಾರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ.ನಾವೆಲ್ಲ ಅವರನ್ನು 5 ವರ್ಷಕ್ಕೆ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಅದನ್ನು ಪಕ್ಷವು ಒಪ್ಪಿಕೊಂಡಿರುತ್ತದೆ ಹೀಗಾಗಿ ಬದಲಾವಣೆ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿಯನ್ನು ಸಡನ್ ಆಗಿ ಬದಲಾವಣೆ ಮಾಡಲು ಆಗಲ್ಲ. ಸಿಎಂ ಬದಲಾವಣೆಗಾಗಿ ಶಾಸಕ ಪಕ್ಷದ ಸಭೆ ಕರೆಯಬೇಕು. ಸಿದ್ದರಾಮಯ್ಯ ಮೇಲೆ ಯಾವ ಆರೋಪವು ಇಲ್ಲ, ಸ್ಕ್ಯಾಮ್ ಇಲ್ಲ ಸಿದ್ದರಾಮಯ್ಯ ಬೆಸ್ಟ್ ಸಿಎಂ ಇನ್ ಇಂಡಿಯಾ ಎಂದು ತಿಳಿಸಿದರು.