ಮುಂಬೈ : ನಮ್ಮ ಜಗಳಕ್ಕಿಂತ ಮರಾಠಿ ಭಾಷೆಗೆ ಮೊದಲ ಆದ್ಯತೆ ನೀಡುತ್ತೇವೆ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಸಹಿಸುವುದಿಲ್ಲ. ಮಹಾರಾಷ್ಟ್ರದಲ್ಲಿರಬೇಕು ಅಂದರೆ, ಮರಾಠಿ ಭಾಷೆ ಕಲಿಯಬೇಕು ವಿನಾಕಾರಣ ಬೇರೊಬ್ಬರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಮಹಾರಾಷ್ಟ್ರದ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಈ ಒಂದು ಹೇಳಿಕೆ ನೀಡಿದರು.
20 ವರ್ಷಗಳ ಬಳಿಕ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಮತ್ತೆ ಒಂದಾಗಿದ್ದು, ಮರಾಠಿ ವಿಡಿಯೋ ರ್ಯಾಲಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ದಶಕಗಳ ಬಳಿಕ ನಾನು ಮತ್ತು ರಾಜ್ ಠಾಕ್ರೆ ವೇದಿಕೆ ಹಂಚಿಕೊಂಡಿದ್ದೇವೆ. ರಾಜ್ ಠಾಕ್ರೆ ಬಹಳ ಅತ್ಯುತ್ತಮ ಭಾಷಣ ಮಾಡಿದ್ದಾರೆ. ಹಿಂದುತ್ವ ಅಂದರೆ ಏನೆಂದು ಬಿಜೆಪಿಯವರು ನಮಗೆ ಕಲಿಸಬೇಕಾಗಿಲ್ಲ. ನಾಯಕರನ್ನು ಬಳಸಿಕೊಂಡು ಬಿಡುವುದು ಬಿಜೆಪಿ ಅವರ ಪಾಲಿಸಿಯಾಗಿದೆ.ನಾವು ಹಿಂದೂ ಮತ್ತು ಹಿಂದೂತ್ವವನ್ನು ಬಿಟ್ಟಿಲ್ಲ ಮುಂದೆ ಕೂಡ ಬಿಡಲ್ಲ. ನ್ಯಾಯಕ್ಕಾಗಿ ನಾವು ಬಾಹುಬಲಿ ಆಗಲು ಸಿದ್ದರಿದ್ದೇವೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಶಿವಸೇನೆ ಬೆಂಬಲ ನೀಡಿದೆ ಎಂದು ಬಿಜೆಪಿ ವಿರುದ್ಧ ಉದ್ಧವ್ ವಾಗ್ದಾಳಿ ನಡೆಸಿದರು.
ಬಳಿಕ ರಾಜ್ ಠಾಕ್ರೆ ಮಾತನಾಡಿ, ನೀವು ತ್ರೀಭಾಷಾ ಸೂತ್ರವನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ? ನಮಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಪ್ರಥಮ ಭಾಷೆ ಮರಾಠಿ ಎಂದು ಮುಂಬೈನಲ್ಲಿ ಮರಾಠಿ ವಿಜಯ್ ಸಭಾದಲ್ಲಿ ರಾಜ್ ಠಾಕ್ರೆ ಹೇಳಿಕೆ ನೀಡಿದರು. ಹಿಂದಿ ಭಾಷೆಗಳ ರಾಜ್ಯದವರು ಉದ್ಯೋಗಕ್ಕೆ ಇಲ್ಲಿಗೆ ಬರುತ್ತಾರೆ.ಆರ್ಥಿಕತೆಯಲ್ಲಿ ಹಿಂದಿಯೆತರ ಭಾಷೆಗಳ ರಾಜ್ಯಗಳು ಟಾಪ್ ನಲ್ಲಿವೆ. ಮಹಾರಾಷ್ಟ್ರಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ ಹಿಂದಿ ಉತ್ತಮ ಭಾಷೆ ಆದರೆ ಅದನ್ನು ಹೇರಿಕೆ ಮಾಡುವುದಕ್ಕೆ ಆಗಲ್ಲ.ಭಾಷೆಯ ಬಳಿಕ ಇವರು ಜಾತಿ ಮುಂದೆ ಇಟ್ಟುಕೊಂಡು ಹೊಡೆದಾಡುತ್ತಾರೆ ಎಂದು ಬಿಜೆಪಿ ವಿರುದ್ಧ ರಾಜ್ ಠಾಕ್ರೆ ವಾಗ್ದಾಳಿ ನಡೆಸಿದರು.