ನವದೆಹಲಿ: ವಿಧಾನಸಭಾ ಚುನಾವಣೆಗೂ ಮುನ್ನ ಬಿಹಾರದ ಮಹಿಳೆಯರಿಗೆ ತನ್ನ ಸೇವಾ ಸೌಲಭ್ಯ ವಿಸ್ತರಿಸುವ ಕಾಂಗ್ರೆಸ್‌ನ ವಿಶಿಷ್ಟ ಯೋಜನೆ ಭಾರಿ ಸಂಚಲನ ಮೂಡಿಸಿದೆ. ‘ಪ್ಯಾಡ್‌ಮ್ಯಾನ್’ ಚಿತ್ರದಿಂದ ಪ್ರೇರಿತವಾದ ಕಾಂಗ್ರೆಸ್ ಪಕ್ಷವು, ರಾಹುಲ್ ಗಾಂಧಿಯವರ ಫೋಟೋ ಇರುವ ಸ್ಯಾನಿಟರಿ ಪ್ಯಾಡ್‌ಗಳನ್ನು ರಾಜ್ಯದ ಐದು ಲಕ್ಷ ಮಹಿಳೆಯರಿಗೆ ವಿತರಿಸುವುದಾಗಿ ಘೋಷಿಸಿದೆ.
ಪ್ರಿಯದರ್ಶಿನಿ ಉಡಾನ್ ಯೋಜನೆಯಡಿಯಲ್ಲಿ ಈ ಉಪಕ್ರಮವನ್ನು ಜಾರಿಗೆ ತರಲಾಗಿದ್ದು, ಮುಟ್ಟಿನ ಆರೋಗ್ಯ ಮತ್ತು ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ನೀಡಿದ ಭರವಸೆಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಗುಲಾಬಿ ಬಣ್ಣದ ಸ್ಯಾನಿಟರಿ ಪ್ಯಾಡ್ ಬಾಕ್ಸ್‌ನಲ್ಲಿ ರಾಹುಲ್ ಗಾಂಧಿಯವರ ಫೋಟೋ ಇದ್ದು, ಬಡ ಕುಟುಂಬಗಳ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವಿನ ಪಕ್ಷದ ಚುನಾವಣಾ ಭರವಸೆಯನ್ನು ಇದು ಹೊಂದಿದೆ. ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಈ ನಡುವೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) “ಮಹಿಳಾ ವಿರೋಧಿ” ಎಂದು ಕರೆದಿದೆ. “ಸ್ಯಾನಿಟರಿ ಪ್ಯಾಡ್ ಮೇಲೆ ರಾಹುಲ್ ಗಾಂಧಿ ಚಿತ್ರ ಹಾಕಿರುವುದು ಬಿಹಾರದ ಮಹಿಳೆಯರಿಗೆ ಮಾಡಿದ ಅವಮಾನ! ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ!” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಉಚಿತ ಸುದ್ದಿ ಪಡೆದುಕೊಳ್ಳುವುದಕ್ಕೆ ಗುಂಪು ಸೇರಿಕೊಳ್ಳಿ