ಮೈಸೂರು : ಮೈಸೂರಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಸಿಲಿಂಡರ್ ಸ್ಪೋಟಗೊಂಡು, ಮನೆಯೊಂದು ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದಂತಹ ಅತ್ತೆ, ಸೊಸೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನ ವಡ್ಡರಗುಡಿಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಮೈಸೂರು ಜಿಲ್ಲೆಯ ಹುಣಸೂರಿನ ವಡ್ಡರಗುಡಿಯಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮನೆಯ ಮೇಲ್ಚಾವಣಿಗೆ ಛಿದ್ರ ಛಿದ್ರವಾಗಿದೆ. 60 ಗ್ರಾಂ ಚಿನ್ನಾಭರಣ 3 ಲಕ್ಷ ನಗದು ಸೇರಿದಂತೆ 20 ಲಕ್ಷದಷ್ಟು ಸಂಪೂರ್ಣವಾಗಿ ನಾಶವಾಗಿದೆ. ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆ ಮತ್ತೆ ಈರಮ್ಮ, ಸೊಸೆ ಶಾಂತಲಾ ತಕ್ಷಣ ಮನೆಯಿಂದ ಹೊರಗಡೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಿಳಿಗಿರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.