ಮೈಸೂರು : ಮೈಸೂರಲ್ಲಿ ಹುಲಿ ದಾಳಿಗೆ ಒಂದು ಹಸು ಬಲಿಯಾಗಿದ್ದು, ಎರಡು ಹಸುಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಡುವಿನಹಳ್ಳಿ ಗ್ರಾಮದ ನಿವಾಸಿ ನಿಜಲಿಂಗಪ್ಪ ಗೆ ಈ ಹಸುಗಳು ಸೇರಿವೆ ಎನ್ನಲಾಗಿದೆ.
ನಿಜಲಿಂಗಪ್ಪ ಅವರಿಗೆ ಸೇರಿದ 3 ಹಸುಗಳಲ್ಲಿ ಒಂದು ಹಸು ಹುಲಿ ದಾಳಿಗೆ ಬಲಿಯಾದರೆ, ಇನ್ನೆರಡು ಹಸುಗಳಿಗೆ ಗಾಯವಾಗಿದೆ. ಅರಣ್ಯ ಇಲಾಖೆ ಕ್ಯಾಮರಾದಲ್ಲಿ ಹುಲಿ ಓಡಾಟದ ದೃಶ್ಯ ಸೆರೆಯಾಗಿದೆ. ಹೆಡಿಯಾಲ, ಈರೇಗೌಡನ ಹುಂಡಿ, ಅಂಜನಾಪುರ ಬಳಿ ಹುಲಿ ಓಡಾಟ ನಡೆಸಿದೆ.ಹುಲಿ ಸರೆಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಇದೀಗ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೊನ್ ಇಟ್ಟಿದ್ದಾರೆ.