ಮಂಡ್ಯ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಗಳು ದಿಂದದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಲ್ಲೂ ಕಳೆದ 43 ದಿನಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೂ 35 ಜನರು ಸಾವನ್ನಪ್ಪಿದ್ದರೆ. ಇದೀಗ ಮಂಡ್ಯದಲ್ಲಿ ಕೂಡ ಹೃದಯಾಘಾತಕ್ಕೆ ಮಹಿಳೆ ಬಲಿಯಾಗಿದ್ದಾರೆ.
ಹೌದು ಪಾತ್ರೆ ತೊಳೆಯುತ್ತಿದ್ದಾಗಲೇ ಹೃದಯಘಾತದಿಂದ ಮಹಿಳೆಯ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಳೆಹೊನ್ನಗ ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಹೃದಯಘಾತದಿಂದ ಕುಸಿದು ಬಿದ್ದು ಶೀಲಾ (45) ಸಾವನಪ್ಪಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.