ಬೀದರ್ : ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದಂತಹ ಶಾಲಿನಿ ರಜನೀಶ್ ಅವರ ಕುರಿತು ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತಂತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ ಕಾರಿದ್ದು, ಬಿಜೆಪಿಯವರು ರಾಮನ ಕಥೆ ಹೇಳುವ ಬಾಯಲ್ಲಿ ಇಂತಹ ಹಲಕ ಮಾತುಗಳು ಮಾತನಾಡುತ್ತಾರೆ ಎಂದು ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದರು.
ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿಕುಮಾರ್ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ. ರವಿಕುಮಾರ್ ಹೇಳಿಕೆಯಿಂದ ಬಿಜೆಪಿಯ ಸಂಸ್ಕೃತಿ ಗೊತ್ತಾಗುತ್ತದೆ. ಬಿಜೆಪಿಯ ಕುಟಿಲ ರಾಜಕಾರಣ ಮುಖವಾಡ ಬಯಲಾಗುತ್ತಿದೆ. ಮಹಿಳೆಯರ ಬಗ್ಗೆ ಗೌರವದ ಬಗ್ಗೆ ಮಾತನಾಡುತ್ತಾರೆ ಒಂದು ಕಡೆ ರಾವಣನ ಕಥೆಯು ಅವರು ಹೇಳುತ್ತಾರೆ ರಾಮನ ಕಥೆಯು ಬಿಜೆಪಿಯವರು ಹೇಳುತ್ತಾರೆ ಇದು ಬಿಜೆಪಿಯವರ ಕುಟಿಲ ರಾಜಕಾರಣದ ಇನ್ನೊಂದು ಮುಖವಾಡ ಎಂದರು.
ಒಂದು ಕಡೆ ರಾಮಾಯಣದ ಕಥೆ ಹೇಳ್ತಾರೆ ಮತ್ತು ಇನ್ನೊಂದು ರಾವಣನ ಕಥೆಯು ಹೇಳುತ್ತಾರೆ ಬಾಯಿ ತೆರೆದರೆ ಈ ರೀತಿ ಹಲ್ಕ ಮಾತಾಡುತ್ತಾರೆ. ಇದು ಬಿಜೆಪಿಯವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಅವರಿಗೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲ ಅಂತ ತೋರಿಸುತ್ತದೆ ಅವರು ನಡೆದದ್ದೆ ದಾರಿ ಎಂದು ತಿಳಿದುಕೊಂಡಿದ್ದಾರೆ. ಇಡೀ ಮಹಿಳಾ ಕುಲಕ್ಕೆ ಅವರು ಅವಮಾನ ಮಾಡಿದ್ದಾರೆ ಎಂದು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.