ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಇತ್ತೀಚಿಗೆ ಭಾರಿ ಚರ್ಚೆ ನಡೆದಿತ್ತು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ವಿಶೇಷ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಘೋಷಣೆ ಮಾಡಿದ್ದಾರೆ ಈ ವಿಚಾರವಾಗಿ ಬೆಂಗಳೂರಿನಲ್ಲಿ ಅಧ್ಯಕ್ಷ ಡಿಕೆ ಸುರೇಶ್ ಅವರು ಮಾತನಾಡಿದ್ದು ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಕಾಲಿ ಇಲ್ಲ ಏನು ಮಾಡೋದು? ನನಗೂ ನಮ್ಮ ಅಣ್ಣ ಸಿಎಂ ಆಗಬೇಕೆಂಬ ಆಸೆ ಇದೆ ಎಂದು ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನು ಅಲ್ಲ. ಪಕ್ಷದ ಒಳಗೊಡೆಯೋ ಎಲ್ಲರೂ ಆಯ್ಕೆ ಆಗಿರುವುದು. ಪಕ್ಷವನ್ನು ಬಲಪಡಿಸಲು ನಾವೆಲ್ಲ ಬದ್ಧರಾಗಿರಬೇಕು. ನಮ್ಮ ಅಣ್ಣ ಒಮ್ಮೆ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ. ಈ ಆಸೆ ಎಂದು ಇದೆ ನಾಳೆಯು ಇರುತ್ತೆ ಮುಂದೆಯೂ ಇರುತ್ತದೆ. ರಾಜ್ಯದಲ್ಲಿ ಸದ್ಯ ಸಿಎಂ ಕುರ್ಚಿ ಕಾಲಿ ಇಲ್ಲ ಏನು ಮಾಡಬೇಕು? ಎಂದರು.
ಈ ಅವಧಿಯಲ್ಲೇ CM ಆಗ್ತಾರಾ ಅನ್ನೋದನ್ನ ನಾನು ಹೇಳಲು ಆಗಲ್ಲ. ಬಿಜೆಪಿ ಅವರಿಗೆ ನಮ್ಮನ್ನು ಟೀಕೆ ಮಾಡುವುದೇ ಗುರಿಯಾಗಿದೆ. ಎಲ್ಲಿ ಹೋಯಿತು ಬಿಜೆಪಿ 75 ವರ್ಷದ ನಿಯಮ? ಬಿಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಚರ್ಚೆ ಆಯ್ತಲ್ಲ. ಈಗ ಯಾಕೆ ಬಿಜೆಪಿಯವರು ಚರ್ಚೆ ಮಾಡುತ್ತಿಲ್ಲ? ಉತ್ತಮ ಆಡಳಿತ ಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಬೆಂಗಳೂರಿನಲ್ಲಿ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಹೇಳಿಕೆ ನೀಡಿದರು.