ಬೆಂಗಳೂರು : ಬೆಂಗಳೂರಿನಲ್ಲಿ ಒಳ ಮೀಸಲಾತಿ ಸರ್ವೇ ಮಾಡುವ ವೇಳೆ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿದ್ದು ಅಲ್ಲದೆ ಹಲ್ಲೆಗೆ ಮುಂದಾಗಿದ್ದ, ಬಿಬಿಎಂಪಿ ಮೂವರು ಅಧಿಕಾರಿಗಳನ್ನು ಇದೀಗ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸರ್ವೆ ಮಾಡದೆ ಮನೆ ಬಾಗಿಲಿಗೆ ಸ್ಟಿಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕರ ಮೇಲೆ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿದ್ದಾರೆ ಈ ಹಿನ್ನೆಲೆ ಮೂರು ಅಧಿಕಾರಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ.
ಹೌದು ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದ ಮೂವರು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ಒಳ ಮೀಸಲಾತಿ ಸಮೀಕ್ಷೆ ವೇಳೆ ಬಿಬಿಎಂಪಿ ಸಿಬ್ಬಂದಿ ಕಿರಿಕ್ ಮಾಡಿರುವ ವಿಚಾರವಾಗಿ ಇದೀಗ ಸಮೀಕ್ಷೆ ನಡೆಸಿದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ವಿವಿಧ ವಾರ್ಡ್ ಗಳ ಮೂರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಜೊತೆ ಕಿರಿಕ್ ಆರೋಪ ಬೆನ್ನಲ್ಲೇ ಸಸ್ಪೆಂಡ್ ಮಾಡಲಾಗಿದೆ. 198ನೇ ವಾರ್ಡ್ ಕಂದಾಯ ವಸೂಲಿಗಾರ ಸೆಂದಿಲ್ ಕುಮಾರ್, ಬಿಬಿಎಂಪಿ 24ನೇ ವಾರ್ಡಿನ ಕಂದಾಯ ವಸೂಲಿಕಾರ ಪೆದ್ದರಾಜು ಹಾಗೂ ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.