ಬೆಂಗಳೂರು : ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹೆಚ್ಚುವರಿ ಎಸ್ಪಿ ಆಗಿದ್ದ ನಾರಾಯಣ ಬರಮನೆಗೆ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷಕೆ ಮುಂದಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ತೀವ್ರವಾಗಿ ನೊಂದಿರುವ ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಸ್ವಯಂ ನಿವೃತ್ತಿ ಕೋರಿ ಪತ್ರ ಬರೆದಿದ್ದು, ಸದ್ಯ ವೈರಲ್ ಆಗಿದೆ. ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡ ಭರಮನಿ ನಾನು ಮಾಡದೇ ಇರುವ ತಪ್ಪಿಗೆ ಅವಮಾನಕ್ಕೆ ಒಳಗಾಗಿದ್ದೇನೆ ಎಂದು ಪತ್ರದಲ್ಲಿ ಉಲ್ಲೆಖಿಸಿದ್ದಾರೆ.
ಪತ್ರದಲ್ಲಿ ASP ಭರಮನಿ ಅವರು, ಸಾವಿರಾರು ಜನರು ಸೇರಿದ ಸಭೆಯಲ್ಲಿ ನನಗೆ ಅವಮಾನ ಆಗಿದೆ. ಸಾರ್ವಜನಿಕ ಸಭೆಯಲ್ಲಿ ನನ್ನ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ. ನಾನು ಮಾಡದ ತಪ್ಪಿಗೆ ಅವಮಾನಕ್ಕೆ ಒಳಗಾಗಿದ್ದೇನೆ. ಏ ಯಾವನೋ ಎಸ್ ಪಿ ಬಾರಯ್ಯ ಇಲ್ಲಿ ಅಂತ ಕರೆದರು. ಸಿದ್ದರಾಮಯ್ಯ ಅವಮಾನದಿಂದ ನಾನು ನೊಂದಿದ್ದೇನೆ. ಏರು ಧ್ವನಿಯಲ್ಲಿ ಕರೆದಾಗ ಸ್ಥಳೀಯ ಎಸ್ ಪಿ ಆಗಲಿ ಡಿಸಿಪಿ ಆಗಲಿ ಯಾರು ಇರಲಿಲ್ಲ ಸಿದ್ದರಾಮಯ್ಯ ಅವರ ಮಾತಿಗೆ ಓಗೊಟ್ಟು ವೇದಿಕೆಗೆ ಹೋದೆ. ಸಿಎಂ ಗೆ ಗೌರವ ಸೂಚಕವಾಗಿ ವೇದಿಕೆಗೆ ಹೋದೆ.
ಆಗ ನನಗೆ ಏಕಾಏಕಿ ಕೈ ಎತ್ತಿ ಕಪಾಳ ಮೋಕ್ಷಕ್ಕೆ ಬಂದಿದ್ದಾರೆ. ಕೂಡಲೇ ನಾನು ಹಿಂದೆ ಸರಿದೆ ಎಂದು ಪತ್ರದಲ್ಲಿ ನೋವನ್ನು ತೋಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹರಿದ ಕಪಾಳಮೋಕ್ಷವನ್ನು ತಪ್ಪಿಸಿಕೊಂಡಿ ಸಾರ್ವಜನಿಕವಾಗಿ ಆದ ಅವಮಾನದಿಂದ ಅಲ್ಲ. ನಾನು ಮಾಡಿದ ತಪ್ಪಿಗೆ ಅವಮಾನಕ್ಕೆ ಒಳಗಾಗದೆ ರೂ. 10,000ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು. ಎಲ್ಲರ ಮುಂದೆ ನಾನು ಅವಮಾನಕ್ಕೆ ಒಳಗಾದೆ ಸಿಎಂ ಸಿದ್ದರಾಮಯ್ಯ ಪದವಿಗೆ ಚ್ಯುತಿ ಬರಬಾರದೆಂದು ಸುಮ್ಮನಿದ್ದೆ ಯಾವುದೇ ಮರು ಮಾತನಾಡದೆ ಕೆಳಗೆ ಬಂದೆ ಎಂದು ಪತ್ರದ ಮೂಲಕ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ತಮ್ಮ ನೋವು ತೋಡಿಕೊಂಡಿದ್ದಾರೆ.