ಚಿಕ್ಕಮಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಕಳೆದ ಒಂದುವರೆ ತಿಂಗಳಲ್ಲಿ 31ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೀಗ ಇಂದು ಬೆಳಿಗ್ಗೆ ಕಲಬುರ್ಗಿ ಯಾದಗಿರಿಯಲ್ಲಿ ಇಬ್ಬರು ಹೃದಯಘಾತಕ್ಕೆ ಬಲಿಯಾಗಿದ್ದು, ಇಂದು ಚಿಕ್ಕಮಗಳೂರಲ್ಲಿ ಓರ್ವ ಯುವಕ ಹಾಗೂ ಚಾಮರಾಜನಗರದಲ್ಲಿ ಖಾಸಗಿ ಬಸ್ ಚಾಲಕ ಸಾವನಪ್ಪಿದ್ದಾರೆ.
ಹೌದು, ಚಿಕ್ಕಮಗಳೂರಲ್ಲಿ ಹೃದಯಾಘಾತಕ್ಕೆ 29 ವರ್ಷದ ಯುವಕ ಸಾವನ್ನಪ್ಪಿದ್ದಾನೆ, ಟೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದ ಹರೀಶ್ ಸಾವನಪ್ಪಿದ್ದಾರೆ. ತರೀಕೆರೆ ತಾಲೂಕಿನ ಶವಾನಿ ಗ್ರಾಮದಲ್ಲಿ ಘಟನೆ ನಡೆದಿದ್ದು ನಿನ್ನೆ ಬೆಳಗಿನ ಜಾವ ಯುವಕ ವಾಂತಿ ಮಾಡಿಕೊಂಡಿದ್ದ. ಕ್ಯಾಸ್ಟ್ರಿಕ್ ಎಂದು ಮಾತ್ರೆ ನುಂಗಿ ಮಲಗಿದ್ದರು ಮತ್ತೆ ವಾಂತಿಯಾಗಿ ಹರೀಶ್ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಇನ್ನು ಮತ್ತೊಂದು ಹೃದಯಾಘಾತ ಘಟನೆ ನಡೆದಿದ್ದು, ಖಾಸಗಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಮೀಣ್ಯಂ ಗ್ರಾಮದ ರಮೇಶ್ ಸಾವನಪ್ಪಿದ್ದಾರೆ. ಬಸ್ ಚಲಾಯಿಸುತ್ತಿದ್ದಂತೆ ರಮೇಶ್ (47) ಎನ್ನುವವರಿಗೆ ಎದೆನವು ಕಾಣಿಸಿಕೊಂಡಿದೆ. ಬಸ್ ನಿಲ್ದಾಣಕ್ಕೆ ಬಂದು ಜ್ಯೂಸ್ ಕುಡಿವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಟೋದಲ್ಲಿ ಕೊಳ್ಳೇಗಾಲ ಆಸ್ಪತ್ರೆಗೆ ರಮೇಶ ಅವರನ್ನು ಕರೆದುಕೊಂಡು ಹೋಗಲಾಗಿದೆ. ಎದೆ ಉರಿ ಎಂದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ರಮೇಶ್ ಚಿಕಿತ್ಸೆ ಫಲಿಸದೇ ರಮೇಶ್ ಸಾವನಪ್ಪಿದ್ದಾರೆ.