ಮೈಸೂರು : ರಾಜ್ಯದಲ್ಲಿ ಒಂದಾದ ಮೇಲೊಂದು ಹೃದಯಘಾತ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಒಂದುವರೆ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಹೃದಯಾಘಾತಕ್ಕೆ 31 ಜನರು ಬಲಿಯಾಗಿದ್ದಾರೆ.ಇಂದು ಬೆಳಿಗ್ಗೆ ತಾನೇ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದ್ದು ಇದೀಗ ಮೈಸೂರಿನಲ್ಲಿ ಹೃದಯಾಘಾತಕ್ಕೆ ಇಂಜಿನಿಯರ್ ಒಬ್ಬರು ಸಾವನಪ್ಪಿದ್ದಾರೆ.
ಹೌದು ಜಿಮ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಹಾಸನ ಮೂಲದ ಇಂಜಿನಿಯರ್ ಒಬ್ಬರು ಸಾವನಪ್ಪಿದ್ದಾರೆ. ಹಾಸನದ ಇಂಜಿನಿಯರ್ ಶ್ರೀಧರ್ ಕೊನೆಯುಸುರಳಿದಿದ್ದಾರೆ ಶ್ರೀಧರ್ (51) ಎನ್ನುವವರು ಸಾವನಪ್ಪಿದ್ದಾರೆ. 10 ದಿನಗಳ ಹಿಂದೆ ವ್ಯಾಯಾಮ ಮಾಡುವಾಗ ಈ ಒಂದು ಘಟನೆ ನಡೆದಿದೆ. ವಿಜಯನಗರ ಬಡಾವಣೆಯ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಶ್ರೀಧರ ಸಾವನಪ್ಪಿದ್ದಾರೆ.