ಬೆಂಗಳೂರು : ಕನ್ನಡದ ದಿಗ್ಗಜ ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ತಮಿಳಿನ ಯುಟ್ಯೂಬರ್ ಒಬ್ಬ ಹೀಯಾಳಿಸಿದ್ದು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಕೋಟಿಗೊಬ್ಬ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅಭಿನಯವನ್ನು ತಮಿಳಿನ ಯೂಟ್ಯೂಬರ್ ಹೀಯಾಳಿಸಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈತನನ್ನು ಕನ್ನಡಿಗರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಈ ಸಿನಿಮಾದಲ್ಲಿ ಕಾಲಿನಿಂದ ವಿಲನ್ ನ್ನು ಹಗ್ಗದಿಂದ ಕಟ್ಟಿ ಹಾಕುವ ದೃಶ್ಯ ಮತ್ತು ಸಿಂಹ ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್ ನ್ನು ಟೀಕಿಸಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗಿದೆ.
ಟೂಬ್ ಲೈಟ್ ಮೈಂಡ್ ಟಾಮ್ ವಿಜಯ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದೆ. ಕೋಟಿಗೊಬ್ಬ ಸಿನಿಮಾ ರಜನಿಕಾಂತ್ ನಟನೆಯ ಭಾಷಾ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದಲ್ಲಿ ಅವರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು.