ಬೆಂಗಳೂರು : ಬೆಂಗಳೂರಲ್ಲಿ ನಿನ್ನೆ ತಾನೇ ಮನೆಯ ಸದಸ್ಯರಿಗೆ ಮಾಹಿತಿ ನೀಡದೆ ಮನೆಯ ಬಾಗಿಲಿಗೆ ಜಾತಿಗಣತಿ ನಡೆಸದೆ ಕೇವಲ ಸ್ಟಿಕರ್ ಅಂಟಿಸಿ ತೆರಳುತ್ತಿದ್ದ ಬಿಬಿಎಂಪಿ ಸಿಬ್ಬಂದಿಯ ಕಳ್ಳಾಟ ಬಯಲಾಗಿತ್ತು. ಇದೀಗ ಒಳ ಮೀಸಲಾತಿ ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ ನಡೆಸಿದ್ದಾರೆ. ಸರ್ವೆ ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕನಿಗೆ ಸಿಬ್ಬಂದಿಗಳು ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಹೌದು ಬೆಂಗಳೂರಿನ ಸಾರ್ವಭೌಮ ನಗರದಲ್ಲಿ ನಿನ್ನೆ ಬೆಳಿಗ್ಗೆ ಈ ಒಂದು ಘಟನೆ ನಡೆದಿದೆ. ನಂದೀಶ್ ಎಂಬಾತನ ಮೇಲೆ ಹಲ್ಲೆಗೆ ಪಾಲಿಕೆ ಸಿಬ್ಬಂದಿಗಳು ಯತ್ನಿಸಿದ್ದಾರೆ. ಬಿಬಿಎಂಪಿ ಸಿಬ್ಬಂದಿಯ ಗೂಂಡಾ ವರ್ತನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆ ಮಾಲೀಕರ ಮಾಹಿತಿ ಪಡೆಯದೆ ಸಿಬ್ಬಂದಿಗಳು ಸ್ಟಿಕರ್ ಆಂಟಿಸಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ಮನೆಯ ಮಾಲೀಕನ ಮೇಲೆ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಸರಿಯಾಗಿ ಸರ್ವೆ ಮಾಡದೆ ಹಲ್ಲೆಗೆ ಮುಂದಾದ ಸಿಬ್ಬಂದಿ ನಡೆಗೆ ಜನರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ದೂರು ದಾಖಲಿಸುವ ಬದಲು ಪೊಲೀಸರು ರಾಜಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.