ಹಾಸನ : ಹಾಸನದಲ್ಲಿ ಹೃದಯಾಘಾತದಿಂದ ಸಾವನಪುತ್ತಿರುವವರ ಸಂಖ್ಯೆ ಮುಂದುವರಿದಿದ್ದು ಇದೀಗ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ 72 ವರ್ಷದ ವೃದ್ದೆ ಒಬ್ಬರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ದೇವಮ್ಮ (72)+ಎನ್ನುವ ವೃದ್ದೆ ಸಾವನಪ್ಪಿದ್ದಾರೆ.
ಎದೆನೋವು ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸಂಬಂಧಿಕರು ತಕ್ಷಣ ಕರೆದುಕೊಂಡು ಹೋಗಿದ್ದರು. ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗುವ ವೇಳೆ ದೇವಮ್ಮ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ವಾಪಸ್ ಆಗುವಾಗ ಮಾರ್ಗ ಮಧ್ಯೆಯೇ ದೇವಮ್ಮಾ ಸಾವನಪ್ಪಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಗ್ರಾಪಂ ಸದಸ್ಯ ಬಲಿ!
ಇನ್ನು ಹಾಸನದಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ ಮುಂದುವರೆದಿದ್ದು, ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕಾರಗೋಡು (41) ಎನ್ನುವವರು ಸಾವನ್ನಪ್ಪಿದ್ದಾರೆ. ಆಲೂರು ತಾಲೂಕಿನ ಕಲ್ಲಾರಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರಾತ್ರಿ ಮಲಗಿದ್ದಲ್ಲಿಯೇ ಸಂತೋಷಕ್ಕೆ ಹೃದಯಘಾತ ಸಂಭವಿಸಿದೆ.
ಬೆಳಿಗ್ಗೆ ಸಂತೋಷ ನನ್ನ ಎಬ್ಬಿಸಲು ಹೋಗಿದ್ದಾಗ ಕುಟುಂಬಸ್ಥರಿಗೆ ಈ ಕುರಿತು ತಿಳಿದಿದೆ ಕೂಡಲೇ ಅವರು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ ಅಷ್ಟರಲ್ಲೇ ಸಂತೋಷ ಸಾವನಪ್ಪಿದ್ದಾರೆ ಹಿಂದೆ ಹೃದಯಘಾತ ಉಂಟಾಗಿ ಸಂತೋಷ ಚಿಕಿತ್ಸೆ ಪಡೆದಿದ್ದರು ಎಂದು ತಿಳಿದುಬಂದಿದೆ.