ಬೀದರ್ : ಬೀದರ್ನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬಾವಿಗೆ ಗೂಡ್ಸ್ ವಾಹನ ಬಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೀದರ್ ತಾಲೂಕಿನ ಘೋಡಂಪಳ್ಳಿ ಬಳಿ ನಿನ್ನೆ ರಾತ್ರಿ ಈ ಒಂದು ಭೀಕರ ಬಗಾದ ಸಂಭವಿಸಿದೆ
ಘೋಡಂಪಳ್ಳಿಯ ಚಾಲಕ ಲಕ್ಷ್ಮಿಕಾಂತ್ ಮತ್ತು ರವಿ ಮೃತ ದುರ್ದೇವಿಗಳು ಎಂದು ತಿಳಿದುಬಂದಿದೆ. ಘೋಡಂಪಳ್ಳಿಯ ಅರ್ಜುನ್, ಪ್ರಜ್ವಲ್, ಪವನ್ ಮತ್ತು ಸಂಗಮೇಶ್ ಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳಿಗೆ ಬೀದರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ ಘಟನೆ ಕುರಿತಂತೆ ಗಾಂಧೀ ಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.