ಬೆಂಗಳೂರು : ಬೆಂಗಳೂರಲ್ಲಿ ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಪುತ್ರಿ ಗಲಾಟೆ ಮಾಡಿದ್ದಾರೆ. ಓಂ ಪ್ರಕಾಶ್ ಪತ್ರಿ ಕೃತಿ ಗಲಾಟೆ ಮಾಡಿದ್ದಾರೆ. ನಂದಿನಿ ಬೂತ್ ಬಳಿ, ಗಲಾಟೆ ಮಾಡಿ ರಂಪಾಟ ಮಾಡಿದ್ದಾರೆ. ಬೂತ್ ನಲ್ಲಿರುವ ಎಲ್ಲಾ ಬಾಟಲ್ ಗಳನ್ನು ಹೊಡೆದು ಹಾಕಿದ್ದಾರೆ. ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಸಮೀಪದ ನಂದಿನಿ ಬೂತ್ ಬಳಿ ಕೃತಿ ಗಲಾಟೆ ಮಾಡಿದ್ದಾರೆ.
ಜೂನ್ 30ಕ್ಕೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕೃತಿ ವರ್ತನೆಗೆ ಬೇಸತ್ತು ಕೂಡಲೇ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃತಿಯನ್ನು ಕರೆದೊಯ್ದಿದ್ದಾರೆ. ಗುರು ನೀಡಿದರು ಕೂಡ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ ಎಂದು ನಂದಿನಿ ಬೂತ್ ಅಂಗಡಿ ಮಾಲೀಕ ತಿಳಿಸಿದ್ದಾರೆ.
ಮನೆಯಲ್ಲಿನ ಕೆಲ ಪರಿಸ್ಥಿತಿಗೆ ಕೃತಿ ಈ ರೀತಿ ಮಾಡುತ್ತಿದ್ದಾಳೆ. ಕೃತಿ ವರ್ತನೆಗೆ ಬೇಸತ್ತು ಅಂಗಡಿ ಮಾಲೀಕ ರೋಸಿ ಹೋಗಿದ್ದಾನೆ. ಕೊಲೆ ಕೇಸ್ನಲ್ಲಿ ಓಂ ಪ್ರಕಾಶ್ ಪತ್ನಿ ಜೈಲು ಪಾಲಾಗಿದ್ದಾರೆ. ಓಂ ಪ್ರಕಾಶ್ ಕೊಲೆಯ ಬಳಿಕ ಸಂಬಂಧಿಕರು ಎಲ್ಲರೂ ಕೂಡ ದೂರಾಗಿದ್ದಾರೆ. ಕೃತಿಯಿಂದ ಕೆಲ ಆತ ಸ್ನೇಹಿತರು ಸಂಬಂಧಿಕರು ದೂರವಾಗಿದ್ದು, ಹಾಗಾಗಿ ಕೃತಿ ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಕೆಲವರು ಹೇಳುತ್ತಿದ್ದಾರೆ.