ಬೆಂಗಳೂರು: ವಾಹನ ಸವಾರರಿಗೆ ಬಿಗ್ ಶಾಕ್, ಹೊಸೂರು ರಸ್ತೆಯ ಎಲಿವೇಟೆಡ್ ರಸ್ತೆ ಹಾಗೂ ನೈಸ್ ರೋಡ್ನಲ್ಲಿ ಟೋಲ್ ದರ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು-ನೆಲಮಂಗಲ ಮಾರ್ಗದಲ್ಲೂ ಹೊಸ ಟೋಲ್ ಶುಲ್ಕ ವಸೂಲಿಗೆ ಎನ್ ಎಚ್ ಎಐ ಅನುಮತಿ ನೀಡಿದೆ.
ಈ ಹೊಸ ದರ ಮಂಗಳವಾರ ಜಾರಿಗೆ ಬಂದಿದ್ದು, ತುಮಕೂರು ಮಾರ್ಗದಲ್ಲಿನ 19.5 ಕಿ.ಮೀ. ಉದ್ದ ಹೆದ್ದಾರಿಗೆ ಟೋಲ್ ದರ ಹೆಚ್ಚಳ ಅನ್ವಯವಾಗಲಿದೆ. ಶುಲ್ಕ ಹೆಚ್ಚಳದ ಜತೆಗೆ ಸಾರ್ವಜನಿಕರು ಬಳಸುತ್ತಿರುವ ವಿವಿಧ ರಿಯಾಯಿತಿ ದರದ ಪಾಸ್ಗಳ ದರದಲ್ಲಿ ಸ್ವಲ್ಪಮಟ್ಟಿಗೆ ರಿಯಾಯಿತಿ ಘೋಷಿಸಲಾಗಿದೆ.
ಕಾರು/ಜೀಪ್ ಏಕ ಪ್ರಯಾಣ 30 ರೂ.
ದ್ವಿಮುಖ ಪ್ರಯಾಣಕ್ಕೆ 45 ರೂ.
ಮಾಸಿಕ ಪಾಸ್ 865 ರೂ.
ಮಿನಿ ಬಸ್ ಗಳಿಗೆ 50 ರೂ
ಲಘು ವಾಣಿಜ್ಯ ವಾಹನಗಳಿಗೆ, 75 ರೂ. ಹಾಗೂ 1,440 ರೂ.ಹೆಚ್ಚಳ
ಬಸ್/ಲಾರಿಗೆ ಕ್ರಮವಾಗಿ 100 ರೂ., 150 ರೂ. ಹಾಗೂ 2,955 ರೂ.
ಜೆಸಿಬಿಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ಕ್ರಮವಾಗಿ 160 ರೂ., 240 ರೂ. ಹಾಗೂ 4,760 ರೂ. ಶುಲ್ಕ ನಿಗದಿಪಡಿಸಲಾಗಿದೆ.