ನವದೆಹಲಿ : ಬುಧವಾರ (ಜುಲೈ 2) ಕಳಪೆ ಫಲಿತಾಂಶಗಳ ನಂತರ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಮನೋಲೋ ಮಾರ್ಕ್ವೆಜ್ ಅವರನ್ನ ವಜಾಗೊಳಿಸಿದೆ. ಜೂನ್ 2024ರಲ್ಲಿ ಭಾರತದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಮಾರ್ಕ್ವೆಜ್, ಕೇವಲ 12 ತಿಂಗಳ ಕಾಲ ಅಧಿಕಾರದಲ್ಲಿದ್ದು, ಸಧ್ಯ ವಜಾಗೊಂಡಿದ್ದಾರೆ.
2026ರ FIFA ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ಪ್ರಗತಿ ಸಾಧಿಸುವಲ್ಲಿ ವಿಫಲವಾದ ನಂತರ ಇಗೊರ್ ಸ್ಟಿಮಾಕ್ ಅವರ ಸ್ಥಾನವನ್ನ ಅಲಂಕರಿಸಿದ್ದರು. ಅವರು ಜವಾಬ್ದಾರಿ ವಹಿಸಿಕೊಂಡ ಅವಧಿಯಲ್ಲಿ, ಭಾರತವು ಮಾರ್ಚ್‌ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಒಂದೇ ಒಂದು ಪಂದ್ಯವನ್ನು ಗೆದ್ದಿತ್ತು.
26,000 ಅಡಿ ಎತ್ತರಕ್ಕೆ ಹಾರಿ ಭೂಮಿಗಿಳಿದ ವಿಮಾನ ; ಭಯಭೀತರಾದ ಪ್ರಯಾಣಿಕರಿಂದ ವಿದಾಯ ಟಿಪ್ಪಣಿ, ವಿಲ್
ಗಮನಿಸಿ ; ಈಗ ರೈಲು ಹೊರಡುವುದಕ್ಕೆ 8 ಗಂಟೆ ಮುಂಚಿತವಾಗಿ ‘ರಿಸರ್ವೇಶನ್ ಚಾರ್ಟ್’ ಬಿಡುಗಡೆ