ಹಾಸನ : ಹಾಸನದಲ್ಲಿ ಮದುವೆಯಾದ ಆರು ತಿಂಗಳಲ್ಲಿ ಗೃಹಿಣಿ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮದ ವಿದ್ಯಾ (24)ಇದೀಗ ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯಯವರಾದ ವಿದ್ಯಾ ಹಾಸನದ ಸೋಮಲಾಪುರದ ಶಿವು ಜೊತೆ ಮದುವೆಯಾಗಿದ್ದರು. ಬೆಂಗಳೂರಿನ ಶಂಕರಿಪುರಂನಲ್ಲಿ ಶಿವು ಪೊಲೀಸ್ ಆಗಿದ್ದರು. ಜೂನ್ 30ರಂದು ವಿದ್ಯಾ ಕಾಣೆಯಾಗಿದ್ದರು. ನಂತರ ಹಾಸನ ಜಿಲ್ಲೆಯ ಅರಸೀಕೆರೆ ರೈಲ್ವೆ ಹಳಿ ಸಮೀಪ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.
ಜೂನ್ 30 ರಂದು ಅರಸೀಕೆ ನಗರದ ರೈಲ್ವೆ ಟ್ರ್ಯಾಕ್ ಬಳಿ ವಿದ್ಯಾ ಮೃತದೇಹ ಪತ್ತೆಯಾಗಿದೆ. ಪತಿ ಕುಟುಂಬದವರಿಂದಲೇ ಮಗಳ ಕೊಲೆಯಾಗಿದೆ ಎಂದು ವಿದ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.