ಹಾಸನ : ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 25 ಜನರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಈ ಒಂದು ಪ್ರಕರಣಗಳಿಂದ ಹಾಸನ ಜಿಲ್ಲೆ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ, ಇದರ ಬಣ್ಣಲ್ಲೇ ರಾಜ್ಯ ಸರ್ಕಾರ ತನಿಖಾ ತಂಡವನ್ನು ರಚನೆ ಮಾಡಿದ್ದು ಇದೀಗ ಎಂದು ಹಾಸನ ಜಿಲ್ಲೆಗೆ ಭೇಟಿ ನೀಡಿ ತನಿಖಾ ತಂಡವು ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸಿದೆ.
ಹೌದು ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 25 ಜನರು ಸಾವನ್ನಪ್ಪಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಇದೀಗ ತನಿಖೆ ಆರಂಭವಾಗಿದೆ. ನಿನ್ನೆಯಿಂದಲೂ ಮೃತರ ಮನೆಗಳಿಗೆ ತಜ್ಞರ ತಂಡ ಭೇಟಿ ನೀಡಿದೆ. ಸಾವಿಗೆ ನಿಖರವಾದ ಕಾರಣ ಪತ್ತೆಗೆ ಆರೋಗ್ಯ ಇಲಾಖೆ ತಂಡ ಮುಂದಾಗಿದ್ದು, ಹಾಸನ ತಾಲೂಕಿನ ಚಿಕ್ಕಕೊಂಡಗಳದ ಸತೀಶ್ ನಿವಾಸಕ್ಕೆ ತಜ್ಞರ ತಂಡ ಭೇಟಿ ನೀಡಿದೆ. ಸತೀಶ್ ಆರೋಗ್ಯ ಹೇಗಿತ್ತು? ಆಹಾರ ಪದ್ಧತಿ ಹೇಗಿತ್ತು? ಎಂಬಿಇತ್ಯಾದಿ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟಿರುವ 25 ಜನರ ಮನೆಗಳಿಗೂ ತಂಡ ಭೇಟಿ ನೀಡಲಿದೆ. ಹಾಸನ ಜಿಲ್ಲಾ ವೈದ್ಯಾಧಿಕಾರಿ ಡಾ.ಅನಿಲ್ ನೇತ್ರತ್ವದಲ್ಲಿ, ಆರ್ ಸಿ ಎಚ್ ಡಾ. ಚೇತನ್ ಹಾಗು ಮೆಡಿಸನ್ ವಿಭಾಗದ ಡಾ. ಬಿಂದು ತಂಡದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಎಲ್ಲಾ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಸಾವಿಗೆ ಹೃದಯಾಘಾತಕಾರಣ ವಾತಾವ ಬೇರೆ ಕಾರಣದಿಂದ ಸವಾಗಿದೆಯಾ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಅನಿಲ ನೇತೃತ್ವದ ತಂಡ ವರದಿ ನೀಡಲಿದೆ.